ಅನುದಿನ ಕವನ-೩೫೩, ಕವಿ: ಜಿ ಟಿ ಆರ್ ದುರ್ಗ , ಜಿ ಹೆಚ್ ಎಲ್ ಬಂಗಾರಪೇಟೆ, ಕವನದ ಶೀರ್ಷಿಕೆ: ಅವಳ‌ನಗು

ಅವಳ ನಗು

ಹಸಿರಾದ ಎಲೆಯೊಳಗೆ
ಮಕರಂದ ಸವಿಯಾಗಿ
ಸೊಗಸಾದ ನವಿ ಮಾತಲಿ ನಗುನಗು

ನಗಬೇಕು ನಗತಿರಬೇಕು
ಹೂವಂತೆ ಮನಸು ಅರಳಿರಬೇಕು
ಸ್ವರ್ಗವೆ ಕಂಡು ಕೆಳಗಿಳಿಯಲೆ ಬೇಕು
ನಗುನಗು ದಿನವು ನಗುನಗು

ಪ್ರಕೃತಿ ಸುಂದರ ತೋಟದಲ್ಲಿ
ಅಚ್ಚ ಹಸಿರು ಅರಳಿದ ಮೊಗ್ಗಲ್ಲಿ
ಗುಲಾಬಿ ಹೂವಂತೆ ನಗಬೇಕು
ತುಟಿ ಬಿಚ್ಚಿ ದಿನವು ನಗುನಗು

ಏಳೇಳು ಲೋಕದಲ್ಲಿ ಯಾರಿಲ್ಲ ನಿನ್ನಂಗೆ
ನೂರಾರು ರತಿ ದೇವತೆಯರು ಬರಬೇಕು
ಈ ಧರೆಯ ವೈಭೋಗ ಕಂಡು ನಗಬೇಕು
ಕಣ್ ತೆರೆದು ಹಗಲಿರುಳು ನಗುನಗು

ತಾವರೆ ಅರಳುವ ಚೆಲುವಂತಿರಬೇಕು
ಚಂದ್ರಮನೆ ಅರಮನೆ ತೆರೆದಿರಬೇಕು
ಚೆಲುವೆಯೆ ಚಿಲುಮೆ ಚಿಮ್ಮುವಂತಿರಬೇಕು
ಕಾಮನಬಿಲ್ಲಂತೆ ಹರುಷದಿ ನಗುನಗು

-ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ
*****