ಗಂಗಾವತಿ, ಡಿ.23: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅತಿಥಿ ಉಪನ್ಯಾಸಕರ ಮುಷ್ಕರ ಗುರುವಾರಕ್ಕೆ ಹದಿನೈದನೇ ದಿನಕ್ಕೆ ಕಾಲಿಟ್ಟಿತು.
ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ತಮ್ಮನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದಾರೆ.
ಸೇವಾ ಭದ್ರತೆ ಸೇರಿದಂತೆ ತಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದರೂ ಸರಕಾರ ಸ್ಪಂದಿಸದೇ ಇರುವುದು ದುರದೃಷ್ಟಕರ ಎಂದು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಖಾಜಾಸಾಬ್ ಗಡಾದ್ ಅವರು ನೋವು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹೋರಾಟದ ಭಾಗವಾಗಿ ಮುಖ್ಯಮಂತ್ರಿಗಳು, ರಾಜ್ಯಪಾಲರ ಗಮನ ಸೆಳೆಯಲು ಮುಷ್ಕರ ನಿರತರು ಪತ್ರ ಚಳವಳಿ ಆರಂಭಿಸಿದ್ದಾರೆ.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಪಂಚಾಕ್ಷರಯ್ಯ ಸ್ವಾಮಿ, ಮಹೇಶ್ ಕುಮಾರ್, ದೊಡ್ಡ ಬಸಮ್ಮ, ವಿಜಯಲಕ್ಷ್ಮಿ, ಪರ್ವೀನ್ ಸುಲ್ತಾನ್, ತಾಯಪ್ಪ, ಪಾಂಡುರಂಗ, ನಟರಾಜ್, ಮಂಜುನಾಥ್, ಬಾಬುಸಾಬ್ ಮತ್ತಿತರರು ಭಾಗವಹಿಸಿದ್ದರು
*****