ಅನುದಿನ ಕವನ-೩೭೧, ಕವಯತ್ರಿ: ಡಾ.ನಾಗರತ್ನ ಅಶೋಕ ಬಾವಿಕಟ್ಟಿ, ಕವನದ ಶೀರ್ಷಿಕೆ: ಹೊಸ ವರುಷಕೆ ಹೊಸ ಸಂಭ್ರಮವೇಕೊ….

ಹೊಸ ವರುಷಕೆ
ಹೊಸ ಸಂಭ್ರಮವೇಕೊ

ಆಕಾಶದೆತ್ತರ ಕನಸ ಕಟ್ಟಿ
ಜಿಗಿಯುವದಕೊ
ಹೊಸ ಆಸೆಗಳೆಲ್ಲ
ತೆರೆದುಕೊಳ್ಳುವದಕೋ

ಭರವಸೆಯ ಬೇರುಗಳ
ಅಲುಗಾಡಿಸುವದಕೋ
ನಾಳೆಗಳ ಕನಸುಗಳ
ಚದುರಿಸುವದಕೋ

ಹೊಸ ವರ್ಷಕೆ
ಹೊಸ ಸಂಭ್ರಮ ವೇಕೋ

ಕಮರಿದ ಕನಸುಗಳ
ಹೊಸದಾಗಿ ಕಟ್ಟಿಕೊಡುವದಕೋ
ದುಡಿತ ಮರೆತು ತವರ ಸೇರಿ
ಕೆಲಸವಿಲ್ಲದೆ ಕೂರುವದಕೋ

ಜೀವ ಜೀವನವ
ಸಾವಿನ ಸಮೀಪ ತಂದಿರಿಸಿದ
ಕಣ್ಣೀರು ಕಥೆಯ ಕೇಳುವದಕೋ
ನಾಳೆಗಳ ಸ್ಪಷ್ಟತೆಯ
ಕೊರತೆ ಅರಿಯುವದಕೋ

ಹೊಸ ವರ್ಷಕೆ
ಹೊಸ ಸಂಭ್ರಮ ವೇಕೋ

ರಾಹು ಕೇತು ಗಳ ಕರಾಳ ಕತ್ತಲು
ಕವಿಯುವದಕೋ
ಅನಿಶ್ಚಿತ ಸ್ಥಿತಿಯೊಳಗೆ
ಮನುಕುಲವೇ ದೂಡುವದಕೋ

ವಿಷಾದದ ಮುಖ ಹೊತ್ತು
ಕಳೆದ ವರ್ಷ ವ ಬೀಳ್ಕೊಡುವ ದಕೋ
ನಂಬಿಕೆ ಗಳ ನೆಲೆಗಟ್ಟನ್ನು
ಶಿಥಿಲಗೊಳಿಸುವದಕೋ

ಹೊಸ ವರ್ಷಕೆ
ಹೊಸ ಸಂಭ್ರಮವೇಕೋ

ಏನೂ ತಿಳಿಯದ
ಒಗಟಾಗಿ ನಿಲ್ಲುವುದಕೋ
ಕರೋನದ ಮನಕಲುಕುವ
ಅವಾಂತರವ ನೆನೆಯುವದಕೋ

ಅನೃತ ಗ್ರಹಿಕೆ ಗಳ
ಮರು ಸೃಷ್ಟಿ ಸುವದಕೋ
ಮನಕೆ ತೇಪೆ ಹಾಕಿ
ಸರಿ ಮಾಡುವುದಕೋ

ಹೊಸ ವರ್ಷಕೆ
ಹೊಸ ಸಂಭ್ರಮವೇಕೋ

ಎಲ್ಲ ನೋವುಗಳ ಮೀರಿ
ಘನಮನಗಳಾಗಿ
ಗಟ್ಟಿಗೊಳ್ಳುವದಕೋ
ಕಳೆದುಕೊಂಡು ದ ಮರೆತು
ಇದ್ದುದನುಳಿಸಿ
ಸಮಸ್ಥಿತಿ ಕಾಯುವದಕೋ

ಕರೋನೋತ್ತರ ಹೊಸ ಸ್ಥಿತಿಗೆ
ರೂಪಾಂತರಗೊಳ್ಳುವಕೋ
ಹೋಸ ಬದುಕಿಗೆ
ನಾಂದಿ ಹಾಡುವದಕೋ

ಹೊಸ ವರ್ಷಕೆ
ಹೊಸ ಸಂಭ್ರಮವೇಕೋ..

-ಡಾ. ನಾಗರತ್ನ ಅಶೋಕ್ ಭಾವಿಕಟ್ಟಿ, ಹುನಗುಂದ