ಅನುದಿನ ಕವನ-೩೭೩, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕಾವ್ಯ ಪ್ರಕಾರ: ಮುಕ್ತಕಗಳು

ಮುಕ್ತಕಗಳು

ಧರಣಿಯಲಿ ಸಾವುಂಟು ಬದುಕುಂಟು ದಿನದಲ್ಲಿ
ಅರಿಯುತಲಿ ನೋವುಗಳ ಸಹಿಸುತಿರಲಲು
ಮರೆಯುತಲಿ ದು:ಖವನು ಸಾಗುತಲಿ ಮಾನವನು
ಬೆರೆಯುತಲಿ ಕಾಯಕದಿ-ಧರಣಿದೇವಿ

ಧರಣಿಯಲಿ ಕೆಡುಕುಂಟು ಒಳಿತುಂಟು ಜನರಲ್ಲಿ
ಬೆರೆಯುತಲಿ ಒಳಿತನ್ನು ಬಯಸುತಿರಲು
ಮರೆಯದೆಯೆ ಕರಪಿಡಿದು ಹರಿನಮ್ಮ ನಡೆಸುವನು
ಗುರುತಿಸುವ ಭಕುತಿಯನು-ಧರಣಿದೇವಿ

ಧರಣಿಯಲಿ ಬದುಕಿರುವ ಜೀವಿಗಳು ತಿಳಿದಿರಲು
ನರಳುವುದು ನಲಿಯುವುದು ಸಾಮಾನ್ಯವು
ಜರಿಯದಲೆ ಸಹಿಸುತಲಿ ಬಂದಿರುವ ಕಷ್ಟಗಳ
ಜರುಗಿಸುತ ದಿನವನ್ನು-ಧರಣಿದೇವಿ

-ಧರಣೀಪ್ರಿಯೆ, ದಾವಣಗೆರೆ
*****