ಅನುದಿನ ಕವನ-೩೭೬, ಕವಯತ್ರಿ: ಮಂಜುಳಾ. ಬಿ. ಕೆ, ದಾಸರಹಳ್ಳಿ, ಶಿರಾ, ಕವನದ ಶೀರ್ಷಿಕೆ: ಛಲಗಾರ

ಛಲಗಾರ

ಹಾರು ನೀ ಬಾನೆತ್ತರ
ಕಡಲ ಅಲೆಗಳು ಬೋರ್ಗರೆವಂತೆ
ದುರ್ಬಲತೆಗಳ ಗಡಿಯಾಚೆ ಸಾಗಿ
ನಿನ್ನನ್ನೇ ನೀ ಗೆಲ್ಲುವಂತೆ.

ಮಳೆಬಿಲ್ಲಿನ ಕಾಂತಿಯ ರಂಗು
ಯಶಸ್ಸಿನ ಕಿರೀಟದಲ್ಲಿ ಹೊಳೆಯಲು ಕಾಯುತ್ತಿದೆ
ನಿನ್ನೆಜ್ಜೆಯಲ್ಲಿ ಛಲದ ಕಿಡಿಯಿದೆ
ಕೆಚ್ಚೆದೆಯಲ್ಲಿ ಗೆಲ್ಲುವ ಭರವಸೆಯಿದೆ.

ಎದುರಾಗುವ ಅಡೆತಡೆಗಳ ಮೆಟ್ಟಿ ನಿಲ್ಲು
ಹಿಂತಿರುಗಿ ನೋಡದೆ ಜಗವ ನೀ ಗೆಲ್ಲು
ಈ ದೋಣಿಗೆ ನಾವಿಕನು ನೀನೇ
ಗುರಿಮುಟ್ಟು ಚಪ್ಪಾಳೆ ಹೊಡೆಯುವರು ನಿನಗೆ.

ಗುರಿಯ ದಾರಿಯಲ್ಲಿ ನಿಲ್ಲದ ಓಟ
ಒಂಟಿ ಕಾಲಿನಲ್ಲೂ ಸಿಡಿಲಿನ ಅಬ್ಬರ
ಗೆದ್ದೇ ಗೆಲ್ಲುವೆ ನೀ ಒಂದಿನ
ನಿನ್ನೆಸರು ಮೆರೆಯುವುದು ಆ ಶುಭದಿನ.

-ಮಂಜುಳಾ. ಬಿ. ಕೆ, ದಾಸರಹಳ್ಳಿ, ಶಿರಾ,
ತುಮಕೂರು ಜಿ.
*****