ಹಿಂದುಸ್ಥಾನಿ‌ ಗಾಯಕಿ ವಿಜಯ ಕಿಶೋರಿ ಅವರಿಗೆ ಬಳ್ಳಾರಿಯಲ್ಲಿ ಸ್ವರ ಶ್ರದ್ಧಾಂಜಲಿ

ಬಳ್ಳಾರಿ, ಜ.11: ಖ್ಯಾತ ಹಿಂದುಸ್ಥಾನಿ ಹಾಗು ಸುಗಮ ಸಂಗೀತ ಗಾಯಕಿ ಶ್ರೀಮತಿ ವಿಜಯ ಕಿಶೋರ್ ಅವರಿಗೆ ಬಳ್ಳಾರಿಯಲ್ಲಿ ಸೋಮವಾರ ಸ್ವರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಳೆದ ತಿಂಗಳು ನಿಧನರಾದ ಶ್ರೀಮತಿ ವಿಜಯ ಕಿಶೋರ್ ಅವರಿಗೆ ಅಭಿಮಾನಿಗಳು, ಸಂಗೀತ ಪ್ರಿಯರು ಹಾಗು ಶಿಷ್ಯ ಬಳಗ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ರಾಘವ ಕಲಾ ಮಂದಿರದ ಕಿರು ಸಭಾಂಗಣದಲ್ಲಿ ಆಯೋಜಿಸಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರ್ ಕೊಟ್ರಪ್ಪ ಅವರು ಮಾತನಾಡಿ, ಸಂಗೀತ ಶಿಕ್ಷಕಿ ವಿಜಯ ಕಿಶೋರ್ ಅವರು ನಾಡು ಕಂಡ ಶ್ರೇಷ್ಠ ಗಾಯಕಿ. ಹಲವು ವೈಯಕ್ತಿಕ ಸಮಸ್ಯೆಗಳ ನಡುವೆಯೂ ಪ್ರತಿಭಾವಂತ ಶಿಷ್ಯರನ್ನು ಬೆಳಿಕಿಗೆ ತರುವಲ್ಲಿ ಶ್ರಮಿಸಿದ್ದರು ಎಂದು ಹೇಳಿದರು.
ಹಿರಿಯ ಸಂಗೀತ ಕಲಾವಿದ ದೊಡ್ಡಯ್ಯ ಕಲ್ಲೂರ್, ನಾಗಭೂಷಣ್ ಬಾಪುರೆ, ದೊಡ್ಡಬಸವ ಗವಾಯಿ, ಸಂಧ್ಯಾ ಕೋಲಾಚಲಂ, ಅಶ್ವಿನಿ ರಮೇಶ್, ಅನುಕೃಪಾ ರೌಡೂರ್, ವೈಷ್ಣವಿ, ಸನ್ನಿಧಿ, ವಿಭಾವರಿ ಕುಲಕರ್ಣಿ ಒಳಗೊಂಡಂತೆ ಅನೇಕ ಶಿಷ್ಯಂದಿರು ಸ್ವರ ಶ್ರದ್ಧಾಂಜಲಿ ಅರ್ಪಿಸಿದರು.
ಹಾರ್ಮೋನಿಯಂ ವಾದಕ ಪೊಲಕ್ಸ್ ಹನುಮಂತಪ್ಪ, ಹಿರಿಯ ರಂಗ ಕಲಾವಿದ ರಮೇಶ್ ಗೌಡ ಪಾಟೀಲ್, ಕಲಾ ನಿರ್ದೇಶಕ ಮಂಜುನಾಥ್ ಗೋವಿಂದವಾಡ,
ಗಾಂಧೀ ಭವನ ಕಾರ್ಯದರ್ಶಿ
ಟಿ. ಜಿ. ವಿಠ್ಠಲ್ ಮತ್ತಿತರ ಗಣ್ಯರು ಪುಷ್ಪಾರ್ಪಣೆ ಮಾಡಿದರು.
ಸಂಗೀತ ಕಾರ್ಯಕ್ರಮದಲ್ಲಿ ಪೋಲಕ್ಸ್ ಹನುಮಂತಪ್ಪ ಹಾರ್ಮಿನಿಯಂ ಸಾಥ್ ನೀಡಿದರೆ ಹಿರಿಯ ತಬಲ ವಾದಕ
ಪವಮಾನ ಅರಳಿಕಟ್ಟಿ, ಸುಧಾಕರ್ ಹಾಗು ಹರ್ಷ ತಬಲಾ ಸಾಥ್ ನೀಡಿದರು.
*****