ಅನುದಿನ ಕವನ-೩೭೭, ಕವಯತ್ರಿ: ವಾಸಂತಿ ಸಾಲ್ಮನಿ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಕಾದು ಕುಳಿತಿರುವೆ

ಕಾದು ಕುಳಿತಿರುವೆ

ನಾ ಕೂತಿರುವೆ ನೀ ಬರುವ
ಹಾದಿಯ ನೋಡುತ….
ನಿನ್ನ ಬರುವಿಕೆಯನ್ನು
ಹಂಬಲಿಸುತ ನನ್ನ ಮನದಳು..

ನಿನ್ನ ಹೆಸರಿನ ಪುಸ್ತಕವ ಹಿಡಿದು
ನಿನ್ನೊಲವಿನಾ ಗೀತೆ ಓದುತ…
ಕಣ್ಣ ರೆಪ್ಪೆಯ ಮಿಟಿಕಿಸದೇ
ನಿನ್ನ ಬರುವಿಕೆಯ ಕಾಯುತ…

ನಿನಗಾಗಿ ನಾ ಹುಟ್ಟಿರುವೆ
ನಿನ್ನ ನೆಚ್ಚಿನ ಬಣ್ಣದ ಸೀರೆ….
ಅಂದೊಂದು ದಿನ ನೀ ಕರೆದು
ಹೇಳಿದ ಮಾತಿನ ನೆನಪಲಿ..

ನೀಳವಾದ ಕೇಶ ರಾಶಿಯ
ಬಿಟ್ಟು ಕೂತಿರುವೆ…
ನೀ ತರುವ ಮಲ್ಲಿಗೆಯ
ದಂಡೆಯ ಮುಡಿಸುವೆ ಎಂದು…

ನನ್ನ ಬೊಗಸೆ ಕಣ್ಣಲ್ಲಿ
ನಿನ್ನ ಛಾಯೆ ತುಂಬಿಕೊಂಡು…
ನಿನಗಾಗಿ ಕಾದು ಕುಳಿತಿರುವೆ
ಬಾ ಬೇಗ ಸಖನೆ

✍🏽ವಾಸಂತಿ ಸಾಲ್ಮನಿ, ವಕೀಲರು,
ಹಗರಿಬೊಮ್ಮನಹಳ್ಳಿ
*****