ಗಜಲ್
ಕಡಲು ಭೋರ್ಗರೆಯುತ್ತಲೇ ಇತ್ತು ಈ ಎಲೆ ಅಲ್ಲೇ ಇತ್ತು
ಮಳೆ ಧೋ ಎಂದು ಸುರಿಯುತ್ತಲೇ ಇತ್ತು ಈ ಎಲೆ ಅಲ್ಲೇ ಇತ್ತು
ಹಳ್ಳಿಗಳೆಲ್ಲ ಓಟದಲ್ಲಿ ಬಿದ್ದು ನಗರಗಳಾದವಲ್ಲವೇ…?
ಋತುಮಾನ ಎದ್ದು ಬಿದ್ದು ಓಡುತ್ತಲೆ ಇತ್ತು ಈ ಎಲೆ ಅಲ್ಲೇ ಇತ್ತು
ದಿನವೂ ಬಣ್ಣ ಬದಲಿಸುವವರ ಮದ್ಯ ನಗುತ್ತಲಿರುವೆ ಅಲ್ಲವೇ….?
ವರ್ಷಕ್ಕೊಮ್ಮೆಯಾದರೂ ಸೂರ್ಯನ ಪಥ ಕೂಡ ಬದಲಾಗುತ್ತಲೇ ಇತ್ತು ಈ ಎಲೆ ಅಲ್ಲೇ ಇತ್ತು
ಗೋಡೆಯ ಸುಣ್ಣ ಕೂಡ ಹಳೆತು ಹೋಗಿ ಹೊಸದಾಗುತ್ತಲ್ಲವೇ..ಗೆಳೆಯ
ದಿನಕ್ಕೊಮ್ಮೆ ದಿನಕರನವರ್ಣ ನೆತ್ತರರೂಪ ತಾಳುತ್ತಲ್ಲೇ ಇತ್ತು ಈ ಎಲೆ ಅಲ್ಲೇ ಇತ್ತು
ಬೇರಿನಿಂದ ಚಿಗಿತ ಎಲೆ ಮುಪ್ಪಡರಿ ನೆಲಕಚ್ಚಿ ಬೇರಿಗೆ ಗೊಬ್ಬರವಾಯಿತಲ್ಲವೇ…?
ದೇವನಗರಿಗೆ ಬೆಳಕಿನ ಕಿರಣವಂದು ಪ್ರವೇಶವಾಗುತ್ತಲೇ ಇತ್ತು ಈ ಎಲೆ ಅಲ್ಲೇ ಇತ್ತು
-ದೇವರಾಜ್ ಹುಣಸಿಕಟ್ಟಿ, ರಾಣೇಬೆನ್ನೂರು, ಹಾವೇರಿ ಜಿ.
*****