ಕನ್ನಡ ಬೆಳಕು
ಕನ್ನಡ ಬೆಳಕು ನಮ್ಮ ಮನೆ ಬೆಳಕು
ಕನ್ನಡಿಗರಿಗೆ ಜೀವಂತ ಬದುಕು
ಕನ್ನಡ ನನ್ನುಸಿರು ನಮ್ಮ ಬದುಕಿಗೆ ಹಸಿರು
ಓ ಹೋ…. ನುಡಿ ನುಡಿ ಕನ್ನಡ ಹೊನ್ನುಡಿಯ
ಕನ್ನಡ ಉಸಿರು ಮೈಯಲ್ಲಿ ಬೆರೆತು
ಗಂಧದ ಕಂಪು ನಗುವಲ್ಲಿ ಬೆರೆತು
ಸುವ್ವಾಲಿ ಹಾಡಾಗಿದೇ…..
ಬಂಗಾರ ಬೆಳಕಾಗಿದೇ…
ಹ್ ಹ್ ಹ್ ಓಹೋ…… ಕನ್ನಡ ಕನ್ನಡ
ನಮ್ಮನೆ ಸಿಂಗಾರ……
ಕನ್ನಡ ನುಡಿ ಎಲ್ಲೆಲ್ಲೂ ತಂಗಾಳಿಯಂತೆ
ಬಣ್ಣ ಬಣ್ಣದ ಕಲೆಗಳಲ್ಲೂ ಚಿತ್ತಾರವಂತೆ
ಚೆಲುವಿನಲ್ಲು ಚೈತ್ರವಾಗಿ ಚಿಗುರಿದಂತೆ
ಬಾನು ಕೂಡ ಬಣ್ಣಿಸಿದೆ ಕನ್ನಡ ಚೆಲುವು
ನಮ್ಮೂರ ಚೆಲುವು ನಮ್ ಜನರ ನಗುವು
ಓ ಹೋ….. ಕನ್ನಡ ಕಸ್ತೂರಿ ಕನ್ನಡ….
ಕಲ್ಲು ಮಣ್ಣಲು ನಗುತೈತೆ ಶಿಲೆಗಳ ನಗುವು
ಕೆತ್ತನೆಯ ಹೊಸತೊಂದು ಕನ್ನಡ ನಲಿವು
ಇದು ಇತಿಹಾಸ ಸ್ಥಿರವಾದ ಈ ಮಣ್ಣಿದು
ನಾವೆಂದು ಬದುಕಿರುವ ಜೀವಂತ ತಾಣವಿದು
ಮರೆಯಲಾಗದು ಈ ನಾಡು ನನ್ನ ಪ್ರಾಣವು
ಓ ಹೋ… ಓ ಹೋ ಕನ್ನಡ ಬೆಳಕು
ನಮ್ಮನೆಯ ಬೆಳಕು…..
-ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ