ಹೊಸಪೇಟೆ ನಗರಸಭೆ ಅಧ್ಯಕ್ಷರಾಗಿ ಸುಂಕಮ್ಮ ಅವಿರೋಧ ಆಯ್ಕೆ

ಹೊಸಪೇಟೆ(ವಿಜಯನಗರ ಜಿಲ್ಲೆ)ಜ.22: ಹೊಸಪೇಟೆ ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೆ ಸಂಚುನಾವಣೆಯಲ್ಲಿ ಸುಂಕಮ್ಮ ಅವರು ಅವಿರೋಧವಾಗಿ ಆಯ್ಕೆಯಾದರೆ, ಎಲ್ ಎನ್ ಆನಂದ್
22 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಶುಕ್ರವಾರ ಸಹಾಯಕ ಆಯುಕ್ತರೂ ಆದ ಚುನಾವಣಾಧಿಕಾರಿ ಸಿದ್ಧರಾಮೇಶ್ವರ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು.
ಪರಿಶಿಷ್ಟ ಜಾತಿ ಮಹಿಳೆ ಮೀಸಲಿನ 4ನೇ ವಾರ್ಡ್ ನ ಸುಂಕಮ್ಮ ಅವರನ್ನು ಅವಿರೋಧವಾಗಿ ಆಯ್ಕೆಯಾದರೆ, ಸಾಮಾನ್ಯ ವರ್ಗದ 15ನೇ ವಾರ್ಡ್ ನ ಎಲ್.ಎಸ್.ಆನಂದ್ ಅವರು 22 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಬಿ.ನಾರಾಯಣ ಅವರು 13 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಅಧ್ಯಕ್ಷರಾಗಿ ಸುಂಕಮ್ಮ ಮತ್ತು ಉಪಾಧ್ಯಕ್ಷರಾಗಿ ಎಲ್.ಎಸ್.ಆನಂದ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಸಿದ್ದರಾಮೇಶ್ವರ ಅವರು ಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಹೆಚ್.ವಿಶ್ವನಾಥ್, ನಗರಸಭೆಯ ಆಯುಕ್ತರರಾದ ಮನ್ಸೂರು ಅಲಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ಲೋಕಸಭೆಯ ಸದಸ್ಯ ವೈ.ದೇವೆಂದ್ರಪ್ಪ ಅವರು ಇದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಂಕಮ್ಮ ಮತ್ತು ಎಲ್.ಎಸ್.ಆನಂದ ಅವರಿಗೆ ಚುನಾವಣಾಧಿಕಾರಿಗಳು ಹೂಗುಚ್ಛ ನೀಡಿ ಶುಭಕೋರಿದರು.
*****