ಅನುದಿನ ಕವನ-೩೯೩, ಕವಿ:ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ

ಒಂಟಿ ಎನಿಸುವ
ಮುನ್ನ
ಅಲ್ಲೊಂದು
ಕಿರುಬೆರಳಿದೆ
ಎಂಬುದ ನೆನಪಿಸಿಕೋ…

ಖಾಲಿ ಎನಿಸುವ
ಮುನ್ನ
ಬದಿಯಲ್ಲೆ ಪುಟ್ಟ
ಕೊಳವಿದೆ ಎಂಬುದ
ಮರೆಯದಿರು…

ಪ್ರತಿ ಬಾರಿ
ಕಣ್ಣಂಚಿನಲಿ
ನೀರಾಡುವ ಮುನ್ನ;
ತಲೆಯ ಮೇಲೆ ವಿಶಾಲ
ಆಕಾಶವಿದೆ
ಮತ್ತು ಅಲ್ಲೂ
ಒಂಟಿ ತಾರೆಗಳು
ಮಿನುಗುತ್ತಿವೆ ಎಂಬುದು
ನದರಿಗೆ ಬರಲಿ…!

-ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ
*****