ಮುಕ್ತಕಗಳು
ಧರಣಿಯಲಿ ಸವಿಸುಖವು ಮನದಲ್ಲಿ ತುಂಬಿರಲು
ಭರಪೂರ ಭರವಸೆಯು ನಾಳೆದಿನಕೆ
ಸರಿಯುವವು ದಿನಗಳವು ಸುಲಲಿತವು ಸಂತಸದಿ
ಹರಿದಯೆಯು ನಮಗಿರಲು ‐ಧರಣಿದೇವಿ
ಧರಣಿಯಲಿ ಬರವುಂಟು ಗುಣವುಳ್ಳ ಮನುಜರಿಗೆ
ಜರುಗುವವು ಬಗೆಬಗೆಯ ಹೀನತನವು
ಮರೆತಿರಲು ಮನುಷ್ಯರು ಮಾನವಿಯ ಮೌಲ್ಲವ
ಗುರುತಿಸಲು ಬಲುಕಷ್ಟ-ಧರಣಿದೇವಿ
ಧರಣಿಯಲಿ ನಡೆದಿಹವು ದಿನಬೆಳಗು ಸುಲುಗೆಗಳು
ಸರಿಯಾವ್ದು ತಪ್ಪಾವ್ದು ಅರಿಯದಾಗಿ
ಮೆರೆದಿಹುದು ಎಲ್ಲೆಲ್ಲು ದುಷ್ಟರಾ ಆಡಳಿತ
ಹರನೀನೆ ಗತಿನಮಗೆ ‐ಧರಣಿದೇವಿ
-ಧರಣೀಪ್ರಿಯೆ, ದಾವಣಗೆರೆ