ಅನುದಿನ‌ ಕವನ-೩೯೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಇರುವೆ ನಾನಿರುವೆ

ಇರುವೆ ನಾನಿರುವೆ

ನಾನು ನಾನಾಗಿಯೇ ಇರುವೆ
ದೂರದಲ್ಲಿ
ನಾನು ನನಗಾಗಿಯೇ ಇರುವೆ
ಹತ್ತಿರದಲ್ಲಿ
ನೀನೂ ನನ್ನೊಳಗೆ ಇರುವೆ

ಕೈಗೆ ಸಿಗದಷ್ಟು ದೂರದಲ್ಲಿ
ಮನಸ್ಸಿಗೆ ಸದಾ ಸಿಗುವಷ್ಟು ಹತ್ತಿರದಲ್ಲಿ ನಾನಿರುವೆ

ನಮ್ಮಿಬ್ಬರ ಯಾರೂ ಅರಿಯಲಾರದಷ್ಟು ದೂರದಲ್ಲಿ
ನಮ್ಮಿಬ್ಬರ ಗೆಳೆತನ ಕಣ್ಮರೆಯಾಗದಷ್ಟು ಹತ್ತಿರದಲ್ಲಿ ನಾನಿರುವೆ

ನೀನು ನನ್ನ ಈ ದೂರದಿಂದ ಇನ್ನೂ ದೂರ ತಳ್ಳಲಾರದಷ್ಟು ದೂರದಲ್ಲಿ
ನೀನು ನನ್ನ ಬಯಸಿದಾಗಲೆಲ್ಲಾ ದೊರಕುವಷ್ಟು ಹತ್ತಿರದಲ್ಲಿ
ನಾನಿರುವೆ.

– ಮನಂ, ಐಪಿಎಸ್, ಬೆಂಗಳೂರು