ರಥಸಪ್ತಮಿ
ರಥಸಪ್ತಮಿಯಂದು
ಭಾಸ್ಕರನಿಗೆ ವಿಶೇಷ ನಮನ
ಅಂದು ನಿರಂತರ
ಸೂರ್ಯನಮಸ್ಕಾರ ಮಾಡಿ
ಭಕ್ತಿಯಿಂದ ನಮಿಸೋಣ //
ಎಲ್ಲಾ ಕುಲ ಕೋಟಿ
ಜೀವರಾಶಿಗಳಿಗೆ
ನಿನ್ನಿಂದಲೇ ಜೀವ
ನೀ ಬರುವ ಘಳಿಗೆ
ಮೈ ಮನಸ್ಸಿಗೆ
ನಿತ್ಯ ಹೊಸ ಸಂಭ್ರಮದ ಬಾವ //
ನಿನ್ನ ಬರುವಿಕೆಯಲ್ಲೇ
ಕಾತರದಿ ಕಾಯುತ್ತಿರುವಳು ಇಳೆ
ಕಿರಣ ಸ್ಪರ್ಶ ದಿಂದ
ಅವಳ ಮೊಗದಿ
ಸದಾ ಸಂತೃಪ್ತಿಯ ಕಳೆ //
ಚಿಗುರು – ಎಲೆ – ಮೊಗ್ಗು – ಹೂವು – ಹಣ್ಣು
ನದ – ನದಿಗಳು ನಗಲು
ನೀನೇ ಕಾರಣ
ನಿನ್ನ ಹೊಂಗಿರಣ ಕಾಣಲು
ದೇವ ಮಂದಿರದಿ
ಪೂಜೆ ಪುರಸ್ಕಾರ ಮಂತ್ರ ಪಠಣ//
ಬದುಕು ಪ್ರಫುಲ್ಲಗೊಳ್ಳಲು
ನಿನ್ನಾಗಮನ ಅವಶ್ಯ ;
ನೀನಿದ್ದರೇನೇ ನಿಸರ್ಗ
ಕಾಣುವುದಿಲ್ಲಿ ಸ್ವರ್ಗ //
-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
***** PC: Shiva shankar Banagar