ತ್ಯಾಗಪ್ರೇಮದ ಮಹಾತಾಯಿ
ಜ್ಞಾನ ಪರ್ವತದ
ಜಗದ ವಿದ್ಯಾ ಅನಂತಸಾಗರದ
ಜೊತೆಗಾತಿ;
ಎಂದೂ ಬತ್ತದ
ಜೀವಪ್ರೇಮದ ಜೀವನದಿ.
ದಣಿವರಿಯದ ಹೋರಾಟಸೂರ್ಯನ
ರೆಪ್ಪೆಯೊಳಗೆ ಕಾಪಿಟ್ಟಕೊಂಡ
ಕಾರುಣ್ಯದೇವಿ.
ತ್ಯಾಗ-ತಾಳ್ಮೆಯ
ತಣ್ಣನೆಯ ದೀಪಿಕೆ.
ಸಮಯ ಸಿಗಲಿ
ಸಿಗದಿರಲಿ
ಅರೆಗಳಿಗೆ ಸಿಕ್ಕಾಗ
ಅರೆದಿನ ಜೊತೆಗಿದ್ದಾಗ
ಪ್ರೇಮದ ಸಿಹಿ ಊಟ.
ಬೆರಣಿ ತಟ್ಟಿದ ಕೈಗಳು
ಭವ್ಯಭವಿಷ್ಯವನ್ನು ಬರೆಯಿತು
ಈ ನಾಡ ಮಕ್ಕಳ ನಲಿವಿಗೆ
ತನ್ನ ಮಕ್ಕಳ ಸಾವಿನ ನೋವುಂಡ
ತ್ಯಾಗಪ್ರೇಮದ ಮಹಾತಾಯಿ.
ಭೀಮನ ಓದಿಗೆ
ಅಚಲ ಹೋರಾಟದ ಹಾದಿಗೆ
ತುಂಬು ಬಾಳ್ವೆಗೆ ಬೆಳಕು
ರಮಾತಾಯಿ.. ಮಹಾತಾಯಿ
ಜೋಡಿಬೆಳದಿಂಗಳ ಬೆಳಕಲಿ
ಬಹುಜನರ ಬದುಕು ಹಸನು
ಇಂದು.. ಎಂದೆಂದೂ….
– ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜನಗರ
*****