ಅನುದಿನ ಕವನ-೪೧೪, ಕವಿ:ಶಂಕರಾನಂದ ಹೆಬ್ಬಾಳ, ಇಳಕಲ್, ಕಾವ್ಯ ಪ್ರಕಾರ: ಗಜಲ್

ಗಝಲ್

ಕನಸುಗಳ ಲೋಕವನು ತೆರೆದೆಯಲ್ಲೆ ಗೆಳತಿ
ಮನಸುಗಳ ಮೌನವನು ಅರಿತೆಯಲ್ಲೆ ಗೆಳತಿ

ಭಾವವೀಣೆಯಲಿ ರಾಗವನು ನುಡಿಸುವೆ ಏಕೆ
ಧಾವಿಸುತ ತನುವನು ಅಪ್ಪಿದೆಯಲ್ಲೆ ಗೆಳತಿ

ಬಂಧುರದ ತಲ್ಪವನು ಕೂಡುವೆಯಲ್ಲ ಇಂದು
ನಂದನದಿ ಧ್ಯಾನವನು ತರುವೆಯಲ್ಲೆ ಗೆಳತಿ

ತಪ್ತಗೊಂಡ ಭಾವವನು ನೋಡಿ ನಿಂತಿರುವೆ
ತೃಪ್ತಿಯಲಿ ಬದುಕನು ಪಡೆದೆಯಲ್ಲೆ ಗೆಳತಿ

ಅಭಿನವನ ಕಾವ್ಯವನು ಓದುತ್ತಾ ಕುಳಿತುಬಿಡು
ಶುಭದ ವೇಳೆಯನು ಬೆರೆವೆಯಲ್ಲೆ ಗೆಳೆತಿ

-ಶಂಕರಾನಂದ ಹೆಬ್ಬಾಳ, ಇಳಕಲ್
*****