ಅನುದಿನ ಕವನ-೪೨೨, ಕವಿ:ಮನುಪುರ, ತುಮಕೂರು, ಕವನದ ಶೀರ್ಷಿಕೆ: ಅನುದಿನದ ಗುಮ್ಮ

ಅನುದಿನದ ಗುಮ್ಮ

ಅಷ್ಟು ಮುಖ್ಯವೇ
ಇನ್ನೊಬ್ಬರ ಮನದಲ್ಲಿನ
ನಮ್ಮ ಬಗೆಗಿನ ಅಭಿಪ್ರಾಯ..!
ನೆಮ್ಮದಿಯ ಬದುಕಿಗೆ
ಹೇಳಿಬಿಡಬೇಕು
ಕೆಟ್ಟ ಕುತೂಹಲಕ್ಕೆ ವಿದಾಯ…!

ಅನುದಿನವು ಇದ್ದದ್ದೆ
ಹಾಳು ಜಗದಲ್ಲಿ
ಪ್ರತಿಷ್ಠೆಗಳ ಸಂಘರ್ಷ..….!
ಹೆಣಕೆ ಶೃಂಗಾರವಷ್ಟೆ!.
ಸರಳತೆಯ ತಿರುಳೆ
ಬದುಕಿನ ನಿಜವಾದ ಆದರ್ಶ…!

ಚಲನೆಯಿಲ್ಲದೆ ತಾನೆ
ಕಡಲ ತಟದಲ್ಲಿ
ರಾಶಿ ರಾಶಿ ಮರಳು…!
ಬೀಗಿದರೂ; ಬಾಗಿದರೂ
ತೋರದೆ ಬಿಡದು
ನಾಕು ಜನರ ಬೆರಳು…!

ಮೊದಲೇನಲ್ಲ
ಅಥವಾ; ಕೊನೆಯೂ ಅಲ್ಲ
ಗಾವಿಲರ ಗಯಾಳ ಮಾತು..!
ಗಮನ ಕೊಟ್ಟಷ್ಟು
ಗಹನವಾಗುವ ಗುಮ್ಮ
ನಾಲಿಗೆಗೊ ಬಹಳ ತೂತು..!

-ಮನು ಪುರ, ತುಮಕೂರು