ಅನುದಿನ‌ ಕವನ-೪೨೪, ಕವಯತ್ರಿ: ಡಾ.ಕೃಷ್ಣವೇಣಿ ಆರ್.ಗೌಡ, ಜಿಂದಾಲ್, ತೋರಣಗಲ್ಲು, ಕವನದ ಶೀರ್ಷಿಕೆ: ಆಸೆ

ಆಸೆ

ಬಿಗಿಯಾಗಿದೆ ಮನದಾಸೆಯ
ಭಾವನೆಗಳಿಗೆ
ಸಮುದ್ರ ದೇಹ ಬಾಗಿಲು…

ಮುತ್ತಿನಾಸೆಯ ಕಡಲ
ಮನಕ್ಕೆ ಭಾಷೆ
ಸ್ಪ೦ದಿಸುತಿದೆ….

ಸುತ್ತಲೂ ಅನಕ್ಷರಸ್ಥ
ವ್ಯಾಘ್ರಗಳ ಹಾವಳಿ?
ಪ್ರಾಕ್ರುತಾಚರಣೆಯ
ಧೂಪಕ್ಕೆ ಮೈಯ್ಯ
ಶಕ್ತಿ ನಡುಗಿದೆ…..

ಬಂಧುತ್ವದ ಹೆಗಲು
ಸಿದಿಗೆಯ ಚಪ್ಪರಕೆ
ತಟಸ್ಥವಾಗಿದೆ…

ಕುಸಿದ ಧೈರ್ಯಕ್ಕೆ
ಯಾವ ದಾರದ ಹೆರಳು
ಹೆಣೆಯೋಣ?
ನಿಚ್ಛಣಿಕೆಯ ಕೋರೆಹಲ್ಲು
ಬಿದ್ದು ಬರಿದಾಗಿದೆ….

ಮಾನವತ್ವದ ಮನೆತನ
ಹಳೇ ಸುಣ್ಣ ಕೆಮ್ಮಣ್ಣು
ಬೇಡಿದೆ….

ಕಾಲಚಕ್ರದಡಿಯಲಿ ಆಸೆಗಳ
ಪುನರಾವರ್ತನೆ .
ಮಗ್ಗದ ಹೊಸ ನೆರಿಗೆಯ
ನೋಡುತಿದೆ….

ನ್ಯಾಯ ಪ್ರಮಾಣದ ಕಾಯ
ಕಲೆ ಇನ್ನೂ ಮಾಸಿಲ್ಲ..
ಚರ್ಮ ಚಪ್ಪಲಿಯ
ಡಬ್ಬಣದ ತುದಿ
ಮು೦ದಾಗದೆ ,, ಒಳಿತಿನ
ತಕ್ಕಡಿಯ ಕಾಣಲು
ಹಾದಿಯಲಿ ಸಾಗುತಿದೆ….

ಜಗದ ಮನೆಗೆ ಎಲ್ಲವೂ
ಸು೦ದರ.
ಹಸಿರೆಲೆಯ ಮೇಲೆ
ಹೊಸ ಚಿಗುರ
ಬೆಳಕು ಆಸೆಯ ಕಡಲಿಗೆ
ಸಂತೋಷ ಹಂಚಿದೆ…..

-ಡಾ. ಕೃಷ್ಣವೇಣಿ ಆರ್.ಗೌಡ.
ಜಿಂದಾಲ್, ವಿದ್ಯಾನಗರ, ಸಂಡೂರು ತಾ.
*****