ಅನುದಿನ ಕವನ-೪೨೬, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ವ್ಯರ್ಥ

ವ್ಯರ್ಥ

ಹೆತ್ತೊಟ್ಟೆಗೆ
ಅನ್ನ ನೀಡದವ
ಮುತ್ತಿಟ್ಟಾಕೆಗೆ ಚಿನ್ನ
ಹೇರಿದರೇನು ಬಂತು !

ಮುದಿ ವಯಸ್ಸಿನವರನ್ನು
ವೃದ್ದಾಶ್ರಮದಲ್ಲಿ ಬಿಟ್ಟು
ನೂರಾರು ನಾಯಿಗಳಿಗೆ
ಅನ್ನ ಹಾಕಿದರೇನು ಬಂತು !

ಸತಿಯ ಮತಿಯನ್ನರಿಯದೇ
ಕಣ್ಣಿಗೆ ಮಣ್ಣೆರೆಚಿ
ಸವತಿಗೆ ಹಾಲು
ಸುರಿದರೇನು ಬಂತು !

ಲಕ್ಷ – ಲಕ್ಷ ಸುರಿದು
ಕಟ್ಟಿದ ಮನೆಯೊಳಗೆ
ಬಾಳಲಿಕ್ಕಾಗದಿದ್ದರೆ
ಬದುಕಿಗೇನು ಅರ್ಥ ಬಂತು !

ಕೋಟಿ – ಕೋಟಿ ಲೂಟಿ ಹೊಡೆದ
ರಾಜಕಾರಣಿಗಳಿಗೆ
ಮತ್ತೆ ಮತ್ತೆ
ಓಟು ಕೊಟ್ಟರೇನು ಬಂತು !

-ಶೋಭಾ ಮಲ್ಕಿ ಒಡೆಯರ್🖊️
‌‌ ಹೂವಿನ ಹಡಗಲಿ
*****