ಹರಿಯಾಣ ವಿವಿಗೆ ತೆರಳುತ್ತಿರುವ ಕುಸ್ತಿ ತಂಡಕ್ಕೆ ಶುಭ ಕೋರಿದ ಡಾ. ಬಸವರಾಜ ಪೂಜಾರ್

ಕೊಪ್ಪಳ, ಮಾ.5: ಹರಿಯಾಣ ರಾಜ್ಯದ ಚೌದರಿ ಬನ್ಸಿಲಾಲ್ ವಿವಿ ಬಿವಾನಿಗೆ ತೆರಳುತ್ತಿರುವ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಪುರುಷರ ಕುಸ್ತಿ ತಂಡಕ್ಕೆ ವಿವಿಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಪೂಜಾರ್ ಅವರು ಶುಭ ಹಾರೈಸಿದರು.
ಸ್ವತಃ ಕ್ರಿಡಾಪಟು ಆಗಿರುವ ಪೂಜಾರ್ ಅವರು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಎಲ್ಲಾ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಈ ಸ್ಪರ್ಧೆಯಲ್ಲಿ ಗೆಲವು ಸಾಧಿಸಿ ವಿಶ್ವವಿದ್ಯಾಲಯದ ಗೌರವ, ಕೀರ್ತಿ ಹೆಚ್ಚಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಂಡದ ವ್ಯವಸ್ಥಾಪಕರೂ ಆಗಿರುವ ತರಬೇತುದಾರ ಡಾ. ಸೋಮಪ್ಪ ಬಡಿಗೇರ, ಸಂಘದ ಕಾರ್ಯದರ್ಶಿ ಮಂಜುನಾಥ ಎ. ಉಪಸ್ಥಿತರಿದ್ದರು.
*****