ಕವಿಗಳೊಳಿರುತಿಹ ಗುಣ ಕಲಹಗಳು
ಪ್ರೇಮ ಕವಿ
ತನ್ನ ನಲ್ಲೆಗಾಗಿ
ಹೊಚ್ಚಹೊಸ
ಕವಿತೆಗಳ
ಸದಾಹೊಸೆಯುವವ
ಪ್ರೇಮಕವಿ
ಕವಿ
ಲೋಕದ ಬೀಡೆಗೆ
ಬಿಡುಗಡೆಯ ಬೇಡಿ
ತೊಡೆಯಲು
ಪದಗಳೊಂದಿಗೆ
ಬಡಿದಾಡುವವ
ಕವಿ
ಹಾಸ್ಯ ಕವಿ
ಯಾರದ್ದೊ ಪದಗಳ
ಪದ್ಯಗಳ ತನ್ನ ನಗೆಯ
ಅಮಲಿನಲ್ಲಿ ತೆಲಿಸಿ
ಪದೇ ಪದೇ ಹಳಸಲು
ಕಾವ್ಯಗಳ ತನ್ನ ಮೆದುಳ
ಬಟ್ಟಲಿನಲ್ಲಿ ತೋಳಿಸುವವ
ಹಾಸ್ಯಕವಿ
ಬಂಡಾಯ ಕವಿ
ತಾನು ನುಡಿದುದೆಲ್ಲವ
ಆಳುವ ವರ್ಗ ಕೇಳಿಸಿಕೊಳ್ಳಲಿ
ತಾನಾರಿಗಾಗಿ ನುಡಿವೆನೋ
ಅವರು ತನ್ನ ಅರಿಯಲಿ
ಎಂದು ಜೋರು ಜೋರಾಗಿ
ಎದುರಾಡುವವರನೂ ಮೀರಿ
ತನ್ನ ಕಾವ್ಯವ ಹಾಡುವವ
ಬಂಡಾಯಕವಿ
-ಮನಂ, ಬೆಂಗಳೂರು
*****