ಅನುದಿನ‌ ಕವನ-೪೩೦, ಕವಿ: ಎಂ. ಗಾಳೇರ, ಮಂಗಳೂರು, ಕವನದ ಶೀರ್ಷಿಕೆ: ಮತ್ತೆ ನೆನಪಾಗಿದ್ದು….

ಮತ್ತೆ ನೆನಪಾಗಿದ್ದು….

ಒಂಟಿತನದಲ್ಲೂ ಸುಖವಿದೆಂದು
ನೀ ಬಿಟ್ಟು ಹೋದಾಗಲೇ ಅರಿವಾಗಿದ್ದು
ಯಾಕೆಂದರೆ ಇಲ್ಲಿ;
ನಗುವಿಲ್ಲ ಅಳುವಿಲ್ಲ
ಕನಸಿಲ್ಲ ಮನಸಿಲ್ಲ
ಬರಿ ಮೌನದ ಯಾತ್ರೆ ಅಷ್ಟೆ|

ಈ ಬದುಕೆ ಹೀಗೆ
ಮಲ್ಲಿಗೆಗೆ ತನ್ನ ಪರಿಮಳ ತಾನು
ಸವಿದೆನೆಂದು ಹೇಳಲು ಸಾಧ್ಯವೇ
ನಿನ್ನ ನೆನಪುಗಳೆಲ್ಲಾ
ಒಂದೆ ಬಾರಿ ನನ್ನೆದೆಗೆ ಮುತ್ತಿಗೆ ಹಾಕಿದಾಗ
ನಾನೋಬ್ಬ ಪ್ರಬುದ್ಧ ರಾಜಕಾರಣಿಯಾಗುತೀನಿ

ಖಾಲಿ ಬಿಯರ್ ಬಾಟಲಿ ಹಿಡಿದು
ಕವಿತೆಗೆ ಕಚ್ಚಾವಸ್ತು ಸಂಗ್ರಹಿಸುತ್ತೇನೆ
ರಿಂಗು ರಿಂಗಾಗಿ ಹೊರಟ
ಸಿಗರೇಟ್ ಹೊಗೆಯಲ್ಲಿ
ಮೋಡಗಳನ್ನ ಕಾಣುತ್ತೇನೆ

ಹಳ್ಳಿಯ ಕವಿಯೊಬ್ಬ
ಮೋಟು ಗೋಡೆಯ ಮೇಲೆ
ಅರ್ಧ ಬರೆದಿಟ್ಟ ಕವಿತೆಗೆ
ಜೀವ ತುಂಬುತ್ತೇನೆ
ಕೆರೆಯ ದಂಡೆಯ ಮೇಲೆ
ಕುಳಿತ ಪ್ರೇಮಿಗಳಿಬ್ಬರಿಗು
ಸಂತನಂತೆ ಕಾಣುತ್ತೇನೆ

ಕೊನೆಗೂ…….
ಸಮಾಧಿ ಮತ್ತು ಗೋರಿಯ ಮದ್ಯೆ
ಧರ್ಮಗಳ ಭೋದನೆ ಮಾಡುವಾಗ
ಒಂಟಿತನದಲ್ಲಿ ಸುಖ ಹುಡುಕುವ
ನನ್ನ ಕವಿತೆ ಅಂತ್ಯಸಂಸ್ಕಾರವನ್ನೆ ಮರೆತಾಗ
ಮತ್ತೆ ನೆನಪಾಗಿದ್ದು ನಿನ್ನ ಪ್ರೀತಿ

-ಎಂ. ಗಾಳೇರ, ಮಂಗಳೂರು

One thought on “ಅನುದಿನ‌ ಕವನ-೪೩೦, ಕವಿ: ಎಂ. ಗಾಳೇರ, ಮಂಗಳೂರು, ಕವನದ ಶೀರ್ಷಿಕೆ: ಮತ್ತೆ ನೆನಪಾಗಿದ್ದು….

Comments are closed.