ಬಳ್ಳಾರಿ: ತತ್ವಪದ, ಜಾನಪದ ಕಲೆಗಳ ಬಗ್ಗೆ ಇದ್ದ ಒಲವು ಪ್ರಸ್ತುತ ದಿನಮಾನಗಳಲ್ಲಿ ಮರೆಯಾಗುತ್ತಿದೆ ಎಂದು ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ವಿಷಾಧ ವ್ಯಕ್ತಪಡಿಸಿದರು.
ನಗರದ ಕಸಾಪ ಕನ್ನಡ ಭವನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಂತ ಶಿಶುನಾಳ ಶರೀಫರ ತತ್ವಪದ, ಜನಪದ, ಸಂಸ್ಕೃತಿ ಕಲಾಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಭಜನೆ ಮತ್ತು ತತ್ವ ಪದಗಳು ದಾರಿ ದೀಪಗಳಾಗಿದ್ದವು ಆದರೆ ಪ್ರಸ್ತುತ ಅಧುನಿಕ ಯುಗದಲ್ಲಿ ಮರೆಯಾಗುತ್ತಿರುವುದು ನೋವಿನ ವಿಚಾರ. ಆದರೆ ಹಲವು ಸಂಘ ಸಂಸ್ಥೆಗಳು ಜಾನಪದ ಸಂವರ್ಧನೆಗೆ ಶ್ರಮಿಸುತ್ತಿರುವುದು ವಿಶೇಷ ಎಂದು ಹೇಳಿದರು.
ಮುಷ್ಠಿಗಟ್ಟೆ ಈರನಗೌಡ್ರು, ಮೆಟ್ರಿ ಜಂಬಣ್ಣನವರು ಒಳ್ಳೆಯ ಪುರಾಣಕಾರರು. ಗ್ರಾಮೀಣ ಪ್ರದೇಶಗಳಲ್ಲಿ ಇವರು ಹಾಡುವ ಜನಪದ, ಭಕ್ತಿ, ತತ್ವಪದಗಳು ಕೀರ್ತನೆ ಕೇಳಿ ಗ್ರಾಮೀಣ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು.
ದಾರ್ಶನಿಕರು ಬರೆದ ಸಾಹಿತ್ಯ, ಭಜನೆಯಲ್ಲಿ ನಮ್ಮ ಜೀವನವೇ ಅಡಗಿರುತ್ತದೆ. ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿ ತತ್ವಪದ ,ಸಾಹಿತ್ಯ, ಸಂಸ್ಕೃತಿ ಸಂಘಗಳು ಹುಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನಪದ, ಕಲೆ, ಸಾಹಿತ್ಯ ಉಳಿಸಿ ಬೆಳೆಸಬೇಕು. ಇದು ಮುಂದಿನ ಪೀಳಿಗೆಯ ಯುವಕರಿಗೆ ಸಹಾಯವಾಗುತ್ತದೆ. ಪಾಲಕರು, ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು. ಇಂತಹ ಜನಪದ, ತತ್ವಪದ, ಭಜನ ಟ್ರಸ್ಟ್ ಗಳು ಹುಟ್ಟುಹಾಕುವುದರ ಜತೆ ಬೆಳೆಸಬೇಕು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಜಯಂತಿ, ಹಬ್ಬ ಹರಿದಿನಗಳನ್ನು ಸಮುದಾಯಕ್ಕೆ ಸೀಮಿತವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ದಾರ್ಶನಿಕರು ಹಾಕಿ ಕೊಟ್ಟ ಮಾರ್ಗದಲ್ಲಿ ಎಲ್ಲರು ಸಾಗಬೇಕು ಎಂದು ಹೇಳಿದರು.
ಕವಿ ಅಬ್ದುಲ್ ಹೈ ಮಾತನಾಡಿ, ಶರೀಫರ ಮತ್ತು ಅವರ ತತ್ವಪದಗಳ ಮಹತ್ವ ಬಗ್ಗೆ ಮಾಹಿತಿ ನೀಡಿದರು.
ಜಾನಪದ ಜಡೇಶ, ಕುಮಾರಗೌಡ ತತ್ವಪದಗಳನ್ನು ಹಾಡಿದರು ,ಕಲಾಟ್ರಸ್ಟಿನ ಅಧ್ಯಕ್ಷರಾದ ಪಿ.ಸಣ್ಣ ಹೊನ್ನೂರಸಾಬ್, ಮೆಹತಾಬ್ ಕಪ್ಪಗಲ್ , ಸನ್ಮಾರ್ಗದ ಚಂದ್ರಶೇಖರ ಆಚಾರ್, ಕೆ.ಮಲ್ಲಿಕಾರ್ಜುನ, ಬಿಸಲಳ್ಳಿ ಬಸವರಾಜ್,ಬಿ.ಹನುಮಂತರಾವ್, ಟಿ.ಮಲ್ಲಿಕಾರ್ಜುನ, ಹಾಸ್ಯಕಲಾವಿದರಾದ ಎ.ಎರ್ರಿಸ್ವಾಮಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಣಕಲ್ಲು ಬಸವಪ್ಪ ,,ಮೋಹಿನಿ ಕಾಳಪ್ಪ,ದೇವೆಂದ್ರಗೌಡ,ಸಿದ್ದೇಶ, ಬಯಲಾಟ ಭೀಮಣ್ಣ ಮಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು
*****