ವಿಶ್ವದಾದ್ಯಂತ ಪ್ರತಿ ವರ್ಷ ಮಾ. 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ(2022) ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎನ್ನುವ ಧ್ಯೇಯವಾಕ್ಯ ಗಮನ ಸೆಳೆದಿದೆ. ಸಾಧಕಿ ಮಹಿಳೆಯರನ್ನು ಈ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸುವುದು ಮಾತ್ರವಲ್ಲ ಮಹಿಳಾ ಸಬಲೀಕರಣದ ಬಗ್ಗೆಯೂ ಚರ್ಚಿಸಲಾಗುತ್ತದೆ. ಕರ್ನಾಟಕ ಕಹಳೆ ಡಾಟ್ ಕಾಮ್ ಕವಯತ್ರಿ ಹೂವಿನ ಹಡಗಲಿಯ ಶ್ರೀಮತಿ ಶೋಭ ಮಲ್ಕಿ ಒಡೆಯರ್ ಅವರ ‘ ‘ಸಬಲೆ’ ಕವಿತೆಯನ್ನು ಪ್ರಕಟಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.
ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು!👇
ಸಬಲೆ
ಹೆಣ್ಣು ಅಬಲೆಯಲ್ಲ ಸಬಲೆ
ಅವಳಿಗೂ ಇರಲಿ
ಎಲ್ಲಾ ಕ್ಷೇತ್ರದಲ್ಲೂ ಬೆಲೆ !
ಈ ಪುರುಷ ಪ್ರಧಾನ ಸಮಾಜದಲ್ಲಿ
ಅರ್ಹತೆಗಳಿದ್ದರೂ ಅವಕಾಶ ವಂಚಿತರಾದರು
ಎಷ್ಟೋ ಹೆಂಗಳೆಯರು
ಪ್ರತಿಭೆಯಿದ್ದರೂ ಎಲೆ ಮರೆಯ ಕಾಯಿಯಂತೆ
ಮರೆಯಲ್ಲೇ ಸರಿದರು !
ಪ್ರತಿ ಯಶಸ್ವಿ ಪುರುಷನ ಹಿಂದೆ
ಮಹಿಳೆ ಇರುವಳು ನಿರಂತರ
ಹೆಣ್ಣಿನ ಹಿಂದೆಯೂ ಗಂಡು
ಪ್ರಬಲವಾಗಿ ನಿಂತಾಗ
ಸಾಧಿಸುವಳು ವಿಶೇಷ
ಎಲ್ಲಾ ರಂಗದಲ್ಲೂ, ಎಲ್ಲಾ ಕ್ಷೇತ್ರದಲ್ಲೂ
ಅವಳಿಗೂ ಅವಕಾಶವಿರಲಿ ವೇದಿಕೆ
ಸರಿಸಮಾನವಾಗಿ ಹೆಜ್ಜೆ ಹಾಕುವಳು
ಯಾಕೆ ಹಿಂಜರಿಕೆ ?
ನಿಮ್ಮಗಳ ಬೆಂಬಲವಿರಲು
ಪ್ರಶಸ್ತಿ ಪಡೆದಷ್ಟೇ ಖುಷಿ
ಮನೆಯೊಳಗೆ ಹೇಗೆ ಅಚ್ಚುಕಟ್ಟಾಗಿ
ನಿಭಾಯಿಸುವಳೋ
ಅಷ್ಟೇ ಸಮಾಜವನ್ನು ಸುಧಾರಿಸುವ
ಪ್ರಭುದ್ದತೆ ಇರುವ ಹೆಣ್ಣು
ಸಂಸಾರದ ಬಾಳಿನ ಕಣ್ಣು !
ಅವಳಿರುವೆಡೆ ಸಂತಸ ಸಂಭ್ರಮ
ಅನವರತ
ಇನ್ನಾದರೂ ನೀಡಿರಿ ನಿಮ್ಮ ಪ್ರೀತಿಯ ಮತ
ಅವಳ ಭವಿಷ್ಯಕ್ಕೆ ಹಿತ
-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ
*****