ಮೋಕಾದಲ್ಲಿ ಎಲ್.ಕೆ.ಜಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಬಳ್ಳಾರಿ, ಮಾ.16: ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳಿಗೆ ಬುಧವಾರ ಆಹಾರಧಾನ್ಯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಸಿಯೂಟ ಅಧಿಕಾರಿ ಎಚ್. ಗುರಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಂ. ಸಿದ್ದಲಿಂಗಮೂರ್ತಿ ಇಸಿಓ ಹಿರೇಮಠ, ಕೆಪಿಎಸ್ ಕಾಲೇಜಿನ ಪ್ರಾಚಾರ್ಯೆ ರೋಜಲಿನ್,ಉಪಪ್ರಾಚಾರ್ಯೆ ನಫಿಜಾಭಾನು, ಮುಖ ಗ್ರಾಮ ಉಪ ಅಧ್ಯಕ್ಷೆ ಲಾವಣ್ಯ ಲೋಕೇಶ್ ಗ್ರಾಪಂ ಸದಸ್ಯರು ಎಸ್ಡಿಎಂಸಿ ಸದಸ್ಯರು ಶಿಕ್ಷಕರು,ಪಾಲಕರು, ಮಕ್ಕಳು ಪಾಲ್ಗೊಂಡಿದ್ದರು.
ಶಾಲೆಯ ಮುಖ್ಯಗುರು ವಿರುಪಾಕ್ಷಪ್ಪ ಸ್ವಾಗತ ಭಾಷಣ ಮಾಡಿದರು. ಪದ್ಮರೇಖಾ ಮತ್ತು ಸೌಭಾಗ್ಯಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದರು. ರಾಧಾ ಮತ್ತು ಭಾಗ್ಯ ರೇಖಾ ನಿರೂಪಿಸಿದರು.
*****