ಬಳ್ಳಾರಿ, ಮಾ. 25: ನಗರದ ಲಾಲಾ ಕಮಾನ್ ನಿವಾಸಿ ಮುಲ್ಲಾ ಮೊಹಮ್ಮದ್ ಸಾಬ್ (82) ಶುಕ್ರವಾರ ನಿಧನರಾದರು.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೃತರು ಪತ್ನಿ, ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತಃ ಸಂಡೂರು ತಾಲೂಕು ವಡ್ಡು ಗ್ರಾಮದವರಾದ ಮುಲ್ಲಾ ಮೊಹಮ್ಮದ್ ಸಾಬ್ ಅವರು ವೃತ್ತಿಯಿಂದ ಟೈಲರ್ ಆಗಿದ್ದರು. ನಗರದಲ್ಲಿ “ನವೀನ್ ಟೈಲರ್” ಅಂಗಡಿ ನಡೆಸುತ್ತಿದ್ದರು.
ಶನಿವಾರ ಬೆ. 9 ಗಂಟೆಗೆ ಬಳ್ಳಾರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪ: ಹಿರಿಯ ಪತ್ರಕರ್ತ ಚಂದ್ರಕಾಂತ್ ವಡ್ಡು ಸೇರಿದಂತೆ ಹಲವು ಗಣ್ಯರು ಹಿರಿಯ ಟೈಲರ್ ಮುಲ್ಲಾ ಮೊಹಮ್ಮದ್ ಸಾಬ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
*****