ಅಪ್ಪ ಮಾಡಿಟ್ಟ
ಆಸ್ತಿ,ಮನೆ
ಕಾಪಿಟ್ಟುಕೊಳ್ಳಲು
ಹೆಣಗುವ ನಿಮಗೆ
ಜೀವಕೋಶದ
ಯಾವ ಭಾಷೆಯೂ
ಅರ್ಥವಾಗಲಿಕ್ಕಿಲ್ಲ!
ನಿಮ್ಮ ಕಣ್ಣಲ್ಲಿ
ಸದಾ ಕೆಂಡದ ಮಳೆ!
ಬೆಂದು ಬದುಕಿದ
ನಮಗೆ
ಕೆಂಡ ಹಾಯುವುದು
ಕಷ್ಟವಾ!?
ನೀವು ಚಲ್ಲಿಕೊಂಡು
ಹೋದ ಅಷ್ಟೂ
ಮಾತುಗಳನ್ನು
ಮರೆಸುವ
ಬಂಗಾರದಂತಹ
ಅಕ್ಷರಗಳಿವೆ
ನಮ್ಮ ಬೊಗಸೆಯಲ್ಲಿ..
ಭಾವ ಭಿತ್ತಿಗಳಲ್ಲಿ!
ಹಾದಿ ಕತ್ತರಿಸಬಲ್ಲಿರಷ್ಟೇ!
ನಮ್ಮ ಅಕ್ಷರಗಳ
ಕತ್ತನ್ನಲ್ಲ!!
-ರಂಹೊ, ತುಮಕೂರು
*****