ಕವಯತ್ರಿ ಬಳ್ಳಾರಿಯ ಎನ್.ಡಿ ವೆಂಕಮ್ಮ ಸೇರಿ ಐವರಿಗೆ ಡಾ ಬಾಬು ಜಗಜೀವನ ರಾಮ್ ಪ್ರಶಸ್ತಿ ಪ್ರದಾನ

ಬೆಂಗಳೂರು, ಏ.6: ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ರವರ 115 ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ನಗರದಲ್ಲಿ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ಬಾಬೂಜಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ಗಣ್ಯರು ವಿಧಾನ ಸೌಧದ ಬಾಂಕ್ವೇಟ್ ಸಭಾಂಗಣದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಿ. ದಾನಪ್ಪ ನಿಲೋಗಲ್, ದಕ್ಕಲಿಗ ಮುನಿಸ್ವಾಮಿ,ವೀರಪ್ಪ ಸವಣೂರು, ಕಾಂತರಾಜ ಹಾಗು ಬಳ್ಳಾರಿಯ ಎನ್ ಡಿ ವೆಂಕಮ್ಮ ಅವರಿಗೆ ಡಾ ಬಾಬು ಜಗಜೀವನ ರಾಮ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಲ ಸಂಪೂನ್ಮೂಲ ಸಚಿವ ಗೋವಿಂದ ಎಂ ಕಾರಜೋಳ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್ ಹನುಮಂತಪ್ಪ, ಶಾಸಕ ನಡಹಳ್ಳಿ, ಹಿರಿಯ ಅಧಿಕಾರಿಗಳಾದ ಮೇಜರ್ ಮಣಿವಣ್ಣನ್, ವೆಂಕಟಯ್ಯ, ದಯಾನಂದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
*****