ಹಂಪಿ ಬಣಗಾರ, ಡಾ.ಹಳ್ಳಿಕೇರಿ, ಡಾ. ಚೆಲುವರಾಜು ಸೇರಿ ಐವರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ

ಬಳ್ಳಾರಿ, ಏ.18: ವಿವಿಧ ರಂಗಗಳಲ್ಲಿ ಅನುಮಪ ಸೇವೆ ಸಲ್ಲಿಸಿದ ಖ್ಯಾತ ಛಾಯಾಗ್ರಾಹಕ ಹೊಸಪೇಟೆ(ಹಂಪಿ)ಯ ಶಿವಶಂಕರ ಬಣಗಾರ್, ಹಂಪಿ ಕನ್ನಡ ವಿವಿಯ‌ ಪ್ರಾಧ್ಯಾಪಕರಾದ ಡಾ.‌ಎಫ್.ಟಿ ಹಳ್ಳಿಕೇರಿ, ಡಾ. ಚೆಲುವರಾಜು ಸೇರಿದಂತೆ ಐವರು ಸಾಧಕರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ‌ ಮಾಡಲಾಯಿತು.
ನಗರದ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ, ಕಲ್ಬುರ್ಗಿ ವಿಭಾಗದ
ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.


ಡಾ.ಎಫ್.ಟಿ.ಹಳ್ಳಿಕೇರಿ ಅವರು 2018 ನೇ ಸಾಲಿನ ಪ್ರಶಸ್ತಿ, ಶಿವಶಂಕರ ಬಣಗಾರ ಅವರು 2019 ನೇ ಸಾಲಿನ ಪ್ರಶಸ್ತಿ ಬೆಂಗಳೂರಿನ‌ ಜೈಕುಮಾರ್ ಮರಿಯಪ್ಪನವರು ಅವರಿಗೆ 2021 ಸಾಲಿನ ಹಾಗೂ ಪ್ರಾಧ್ಯಾಪಕ ಡಾ. ಚೆಲುವರಾಜು ಅವರಿಗೆ 2022ನೇ ಸಾಲಿನ ಪ್ರಶಸ್ತಿ ಸ್ವೀಕರಿಸಿದರು.
ಮರಣೋತ್ತರವಾಗಿ ಘೋಷಿಸಿದ್ದ 2020ನೇ ಸಾಲಿನ‌ ಪ್ರಶಸ್ತಿಯನ್ನು ಬಳ್ಳಾರಿಯ ದಿ. ಕೆ. ವೆಂಕಟೇಶ ಅವರ ಕುಟುಂಬದ ಸದಸ್ಯರಿಗೆ ನೀಡಿ ಗೌರವಿಸಲಾಯಿತು.
ಹಕ್ಕಬುಕ್ಕರ ಭಾವಚಿತ್ರಕ್ಕೆ ಶ್ರೀ ಗಳು ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಿದರು.


ಶಿವಮೊಗ್ಗದ ಸಾಹಿತಿ ಡಾ. ಲಿಂಗದಳ್ಳಿ ಹಾಲಪ್ಪ ಅವರು
ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದರು. ಗಣ್ಯರು ಕರ್ನಾಟಕ ಸಾಮ್ರಾಜ್ಯ ವಿಜಯನಗರ ಪುಸ್ತಕ ಬಿಡುಗಡೆ ಮಾಡಿದರು, ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ಚೆಲುವರಾಜು ಅವರು ಮಾತನಾಡಿದರು, ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ, ನ್ಯಾಯವಾದಿ ಕೆ.ಎರ್ರಿಗೌಡ್ರು, ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ. ಬಿ.ಪೋಲಪ್ಪ, ಪದಾಧಿಕಾರಿಗಳು, ರಾಜ್ಯ & ಜಿಲ್ಲಾ ನಿರ್ದೇಶಕರು, ಪಾಲಿಕೆ ಸದಸ್ಯರು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*****

One thought on “ಹಂಪಿ ಬಣಗಾರ, ಡಾ.ಹಳ್ಳಿಕೇರಿ, ಡಾ. ಚೆಲುವರಾಜು ಸೇರಿ ಐವರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ

Comments are closed.