ನಿಮಗೆ ಗೊತ್ತೆ? ಒಂದು ನಗೆಯ ಚಿತ್ರದ ಹಿಂದೆ ಇರುವ ಸ್ವಾರಸ್ಯ!!
ಸಾಮಾನ್ಯವಾಗಿ ನಾವು ಉತ್ತರ ಕರ್ನಾಟಕದ ಜೋಕ್ ಗಳಲ್ಲಿ ಒಬ್ಬ ವ್ಯಕ್ತಿ ನಗುವ ಕಾರ್ಟೂನ್ ಚಿತ್ರವನ್ನು ನೋಡುತ್ತೇವೆ. ಇದುವರೆಗೂ ನಾನು ಅದೊಂದು ಯಾರೋ ಬಿಡಿಸಿರುವ ಕಾರ್ಟೂನ್ ಅಥವಾ ಚಿತ್ರವೆಂದೇ ಅಂದುಕೊಂಡಿದ್ದೆ.
–
ಆಕಸ್ಮಿಕವಾಗಿ ನಗುವಿನ ಚಿತ್ರಗಳನ್ನು ಅಂತರ್ಜಾಲದಲ್ಲಿ ಹುಡುಕುವಾಗ ಸಿಕ್ಕದ್ದು ಇದು ಒಬ್ಬ ನಿಜವಾದ ವ್ಯಕ್ತಿಯ ಚಿತ್ರವೆಂದು. ಆತನ ನಗೆಯನ್ನೇ ಕಾರ್ಟೂನ್ ಮಾಡಲಾಗಿದ್ದು, ಅದು ಇಂದು ಜಗತ್ತಿನಾದ್ಯಂತ ಎಲ್ಲ ಜೋಕ್ ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆತನ ನಗೆಯೇ ವಿಶೇಷವಾಗಿದ್ದು, ಎಲ್ಲರನ್ನೂ ನಗಿಸುತ್ತಿದೆ. ವಿಶೇಷವಾಗಿ ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಈತನ ಚಿತ್ರ ಪ್ರಸಿದ್ಧಿ ಪಡೆದಿದೆ.
–
ಅಂದಹಾಗೆ ಈ ಕಾರ್ಟೂನ್ ನ ಪ್ರಸಿದ್ಧ ವ್ಯಕ್ತಿಯ ಹೆಸರು ಯಾವೊ ಮಿಂಗ್ (Yao Ming) ಎಂದು. ಈಗ ಚೀನಾದ ನಿವೃತ್ತ ಬಾಸ್ಕೆಟ್ ಬಾಲ್ ಕ್ರೀಡಾಪಟು.
–
2009ರಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಈತನ ಸ್ನೇಹಿತ ಮಾಡಿದ ಜೋಕ್ ಗೆ ಯಾವೊ ಮಿಂಗ್ ನಗುತ್ತಾನೆ. ಆ ಸಂದರ್ಭದಲ್ಲಿ ಪತ್ರಕರ್ತರು ಕ್ಲಿಕ್ಕಿಸಿದ ಚಿತ್ರಗಳೇ ಇಂದು ಕಾರ್ಟೂನ್ ಗಳಾಗಿ ಎಲ್ಲೆಡೆ ಬಳಕೆಯಾಗುತ್ತಿರುವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
Bitch Please: Read the Story of Internet Meme of Yao Ming’s Face
–
ಒಂದು ನಗೆಯ ಚಿತ್ರದ ಹಿಂದೆ ಎಷ್ಟೆಲ್ಲ ಸ್ವಾರಸ್ಯ ಇದೆ ಅಲ್ಲವೆ ?
– ಸಿದ್ಧರಾಮ ಕೂಡ್ಲಿಗಿ
*****