ಅನುದಿನ ಕವನ-೪೭೯, ಕವಯತ್ರಿ: ಚನ್ನಮ್ಮ ಎಸ್.ಎಸ್ ಬಾಗಲಕೋಟೆ, ಕವನದ ಶೀರ್ಷಿಕೆ: ನನ್ನಮ್ಮ ಅಮರ, ಗಾಯಕರು: ಆನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ

ನನ್ನಮ್ಮ ಅಮರ

ಅಮ್ಮ ನೀನೆಂದು ಅಜರಾಮರ
ನನ್ನ ನೆನಪಿನಲ್ಲಿಎಂದೆಂದಿಗೂ ನೀನು ಸ್ಥಿರ
ನಿನ್ನ ನಾಮ ಜಪವೇ ನನಗೆ ಸುಮಧುರ
ನನ್ನ ಜೀವಕ್ಕೆ ನೀನೆಂದು ಅಮರ ||1||
ನೈಜತೆಗೆ ನೀಡುತಿದ್ದೆಒತ್ತು
ಆಡಂಬರವಿರಲಿಲ್ಲಯಾವೊತ್ತು
ಗಾಂಭಿರ್ಯದಿಂದ ಜೀವನ ನಡೆಯುತಿತ್ತು
ಜೀವನ ಆನಂದಮಯವಾಗಿತ್ತು ||2||
ನಿನ್ನ ಧ್ವನಿಯ ಕೇಳುವಾಸೆ
ಮಾಡಬೇಡ ನಿರಾಸೆ
ಸತ್ಯ ಹೇಳುವೆ ಇದಲ್ಲದುರಾಸೆ
ಎಲ್ಲಅಮ್ಮಂದಿರು ಅಮರರಾಗಬೇಕೆಂಬಾಸೆ||3||
ಕೊಡಲಿಲ್ಲಯಾರಿಗೂ ತೊ ಂದರೆ
ಆಗಿದ್ದೆನೀನು ಬೇರೆಯವರಿಗೆ ಆಸರೆ
ನಿನ್ನ ಧ್ಯಾನದಲ್ಲಿನಾನು ಸೆರೆ
ಕಾದಿರುವೆನು ನೀ ನೀಡು ಒಂದು ಕರೆ ||4||

-ಚನ್ನಮ್ಮ ಎಸ್ ಎಸ್, ಬಾಗಲಕೋಟೆ
*****

. ಗಾಯಕರು: ಆನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ