ಬಳ್ಳಾರಿ, ಏ.28: ಸ್ಪೋಕನ್ ಇಂಗ್ಲೀಷ್ ತರಬೇತಿ ಪಡೆದ ಪೊಲೀಸರು ಪ್ರತಿದಿನವೂ ಮಾತನಾಡುವ ಕಲೆಯನ್ನು ಉತ್ತಮ ಪಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿದರು.
ಬುಧವಾರ ನಗರದ ಎ ಎಸ್ ಎಮ್ ಕಾಲೇಜ್ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಜರುಗಿದ ಇಪ್ಪತ್ತು ದಿನಗಳ ಸ್ಪೋಕನ್ ಇಂಗ್ಲಿಷ್ ತರಬೇತಿಯ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿದಿನವೂ ಮೂರು ಗಂಟೆಗಳಂತೆ ಅರವತ್ತು ಗಂಟೆಗಳ ಕಾಲ ಯಶಸ್ವಿ ತರಬೇತಿ ಪಡೆದ ತಾವುಗಳು ಮತ್ತಷ್ಟು ಕೌಶಲ್ಯವನ್ನು ವೃದ್ಧಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತರಬೇತಿ ಪಡೆದ ತಾಲೂಕಿನ ಮೂವತ್ತು ಜನ ಪೊಲೀಸರಿಗೆ ಪ್ರಮಾಣ ಪತ್ರಗಳನ್ನು ಎಸ್ಪಿ ಅವರು ವಿತರಿಸಿದರು.
ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ವಿಜೇಯೇಂದ್ರ ರಂಗಪ್ರಸಾದ್ ಮತ್ತು ಸಹೋದ್ಯೋಗಿಗಳು ತರಬೇತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಕುಪ್ಪಗಲ್ ಗಿರಿಜಾ ಅವರು ವಹಿಸಿದ್ದರು.
*****