ಅನುದಿನ ಕವನ-೪೮೪, ಕವಿ:ಶ್ರೀಕಾಂತ ಮಳೆಗಲ್, ಬಳ್ಳಾರಿ, ಕವನದ ಶೀರ್ಷಿಕೆ: ಸಖಿಗೀತಾ

ಸಖಿಗೀತಾ

ಮೊದ ಮೊದಲು ನೀ ನನ್ನ ಸಖಿ ಯಷ್ಟೇ ಖಚಿತ;     ಬರುತ್ತಾ ಆದೆ ಬಲು ಹತ್ತಿರ                                        ನನ್ನ ಹೃದಯ ಕಲಶಕೆ

ಮೌನದ ದೂರಿಗೆ ನನ್ನ ನಿನ್ನ ಪಯಣ
ಸಾಗಿತು ಸುಮ್ಮನೆ ಪ್ರೀತಿಯ ಮೂಲಕ
ಮೆಲ್ಲನೆ….

ಕಚಗುಳಿಯ ನೆನಪುಗಳು.
ಬಲು ಸುಂದರ ; ಅರ್ಥವಲ್ಲದ ಕನವರಿಕೆಗಳು
ಮಾಸುತಲಿವೆ..ನಿನ್ನಯ ಸ್ಪರ್ಶದ ಸವಿಗೆ

ತಿಳಿಯದಾಯ್ತು ಈ ಪ್ರೀತಿಯ
ಕೋರಿಕೆ ಸಲ್ಲಿಸಿರುವೆ ಪ್ರತಿ ಪುಟದ ಮನವಿಯ
ಕಡತಕೆ ನಿನ್ನ ಸಹಿ ಬೇಕಾಗಿದೆ….

ಇಂತಿ..
-ಶ್ರೀಕಾಂತ ಮಳೆಗಲ್,ಬಳ್ಳಾರಿ
*****