ಅನುದಿನ ಕವನ-೪೯೩, ಕವಿ: ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜನಗರ, ಕವನದ ಶೀರ್ಷಿಕೆ: ನನ್ನವ್ವ

🙏ವಿಶ್ವ ತಾಯಂದಿರ ದಿನದ ಶುಭಾಶಯಗಳು 🙏🏻

ನನ್ನವ್ವ

ನನ್ನವ್ವ
ನೋವ ನುಂಗಿ ನಗುವ ನೆಲ
ನನ್ನವ್ವ
ವಿಷವುಂಡು ಸವಿ ನೀಡುವ ಜೀವ ಜಲ

ನನ್ನವ್ವ
ಹಚ್ಚ ಹಸಿರಿನ ಫಲವಂತಿಕೆ
ನನ್ನವ್ವ
ಹಸಿದವರಿಗೆ ಕೈತುತ್ತನಿತ್ತ ಜೀವಂತಿಕೆ

ನನ್ನವ್ವ
ಮೈತ್ರಿ ಒಡಲ ಚಿಗುರು
ನನ್ನವ್ವ
ಪ್ರೀತಿ ಬತ್ತದ ಉಸಿರು

ನನ್ನವ್ವ
ಮಮತೆ ಮಡಿಲಿನ ದೇಶ
ನನ್ನವ್ವ
ಎಂದೂ ಬರೆಯಲಾಗದ ವಿಶ್ವಕೋಶ.

– ಡಾ. ಬಿ. ಆರ್. ಕೃಷ್ಣಕುಮಾರ್, ಚಾಮರಾಜನಗರ
*****