ಅನುದಿನ‌ ಕವನ-೪೯೫, ಕವಯತ್ರಿ: ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುಪ್ತಗಾಮಿನಿ

ಗುಪ್ತಗಾಮಿನಿ

ಅವಳು ತ್ಯಾಗಮಯಿ
ಸಹನಾಮಯಿ
ತ್ಯಾಗದ ಪ್ರತೀಕವೇ ತಾಯಿ !
ಮಕ್ಕಳ ಬೇಕು ಬೇಡಗಳನ್ನು
ತೀರಿಸುವುದರಲ್ಲಿಯೇ
ಅವಳ ಆಯುಷ್ಯ – ಭವಿಷ್ಯ
ಆಕೆಯೊಂದು ತಪಸ್ವಿ
ಸತ್ಸಂಗಗಳೆಲ್ಲವನ್ನೂ ತೊರೆದು
ತನ್ನ ಜೀವನವನ್ನೇ ಧಾರೆಯೆರೆಯುವ
‌ ಅವಳೊಂದು ದೇವತೆ
ಪೂಜ್ಯ ಪುನೀತೆ !
ತನ್ನೊಡಲ ಆಸೆಗಳ ಮೂಟೆಕಟ್ಟಿ
ಬೇರೆಯವರ ಆಸೆಗಳಿಗೆ ನಿಲ್ಲುವಳು
ಸದಾ ಕೈಕಟ್ಟಿ !
ಎಲ್ಲರ ನಿಂದನೆ, ನೋವು, ಕೋಪ – ತಾಪಗಳ
ಸಹಿಸಿಕೊಂಡು
ಮೌನದಲ್ಲೇ ಬಚ್ಚಿಟ್ಟು
ನಗುವ ಬಿಚ್ಚಿಟ್ಟು
ಮತ್ತೆ – ಮತ್ತೆ ಮುಂದಡಿಯಿಡುವ
ಅವಳು ಗುಪ್ತಗಾಮಿನಿ
ಮಾನವೀಯತೆಯ ಖನಿ !
ಅವಳಿರುವೆಡೆ ಪ್ರೀತಿ ಸಂವೃತ
ಸಚ್ಛರಿತ.

-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****