ವಿಶಾಖಪಟ್ಟಣಂ(ಆಂದ್ರ ಪ್ರದೇಶ): ದಯವೇ ಧರ್ಮದ ಮೂಲ ಬಸವಣ್ಣನವರ ಮಾತು ಮಂತ್ರವಾಗಿತ್ತು. ಉಭಯ ಪ್ರಧಾನ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ಜಾಗತಿಕ ಸಮಾಜಶಾಸ್ತ್ರಕ್ಕೆ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಶ್ರೀ ವೇ. ಚನ್ನವೀರಸ್ವಾಮಿಗಳು ಹಿರೇಮಠ (ಕಡಣಿ) ಅವರು ಹೇಳಿದರು.
ನಗರದಲ್ಲಿ ಇತ್ತೀಚೆಗೆ ಕಾವೇರಿ ಕನ್ನಡ ಸಂಘ ಆಯೋಜಿಸಿದ್ದ ಬಸವ ಜಯಂತೋತ್ಸವ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಮಾಜ ನಿರ್ಮಾಣಕ್ಕೆಯತ್ನಿಸಿದರು. ಮಡಿಕೆ, ಮೊರ, ಬೀದಿಯ ಕಲ್ಲು ದೈವ ಕೊಳಗ, ಗಿಣ್ಣಲು ದೈವಗಳನ್ನು ಕಾಣುವುದನ್ನು ತಪ್ಪಿಸಿ ತನ್ನೊಳಗಿನ ದೇವರನ್ನು ಕಾಣುವ ಬಗೆಯನ್ನು ತಿಳಿಸಿಕೊಟ್ಟರು ಎಂದು ತಿಳಿಸಿದರು.
ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಜಿ. ರಾಮ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಕಾನೂನು ವಿಶ್ವವಿದ್ಯಾಲಯದ ಉಪನ್ಯಾಸಕ ದಯಾನಂದ ಮೂರ್ತಿ ಮಾತನಾಡಿದರು. ಕನ್ನಡ ಸಂಘದ ಕಾರ್ಯದರ್ಶಿ ಎಂ. ಸಾಮ್ ಕೋಶಾಧಿಕಾರಿ ಕುಮಾರಸ್ವಾಮಿ ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 30 ವರ್ಷಗಳಿಂದ ಪ್ರವಚನ ಸೇವೆ ಸಲ್ಲಿಸುತ್ತಾ ಬಂದ ವೇ. ಚನ್ನವೀರಸ್ವಾಮಿ ಶ್ರೀಗಳಿಗೆ ಕಾವೇರಿ ಕನ್ನಡ ಸಂಘದಿಂದ ‘ಗುರು ಬಸವ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
1960 ರಿಂದ ಹೊರನಾಡಿನಲ್ಲಿ ಕನ್ನಡತವನ್ನು ಉಳಿಸಿ ಬೆಳಿಸಿಕೊಂಡು ಬಂದಿರಿವ ಕಾವೇರಿ ಕನ್ನಡ ಸೇವೆಯನ್ನು ಸ್ಮರಿಸಿದ ಚನ್ನವೀರಸ್ವಾಮಿಗಳು ಪ್ರಸ್ತುತ ಅಧ್ಯಕ್ಷರಾಗಿರುವ ಜಿ. ರಾಮ ಕಾರ್ಯದರ್ಶಿ ಎಂ.ಸಾಮ್ ಇವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಸಂಚಾಲಕರಾಗಿ, ಕಾವೇರಿ ಕನ್ನಡ ಸಂಘಕ್ಕೆ ತಮ್ಮನ್ನು ಬರಮಾಡಿಕೊಳ್ಳಲು ಕಾರಣರಾದ ಕುಮಾರಸ್ವಾಮಿ ಹಿರೇಮಠ ಅವರಿಗೆ ‘ಪುಟ್ಟರಾಜ ಗುರು ಸೇವಾ ಧೀಕ್ಷೆ ಪ್ರಮಾಣಪತ್ರ’ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಯಾನಂದ್ ಮೂರ್ತಿ, ರಾಜಶೇಖರ್,ಸಿದ್ದಪ್ಪ ಬಿರಾದಾರ, ಸಾಗರ್ ಹಿರೇಮಠ,
ಮಹೇಶ್, ಡಾ. ನಂದಿನಿ, ವಿಜಯಲಕ್ಷ್ಮಿ ಹಿರೇಮಠ ಅವರಿಂದ ವಚನ ಗಾನ, ಚಿಂತನೆ ನಡೆಯಿತು.
ಸಂಘದ ಉಪಾಧ್ಯಕ್ಷ ಅನಂತ್ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಅಂಬಿಕಾ ಲಿಗಾಡೆ ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀ ಬಸವೇಶ್ವರ ಮತ್ತು ಶ್ರೀ ಪುಟ್ಟರಾಜರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗಣ್ಯರು ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿದರು.
ಡಾ. ನಂದಿನಿ ಪ್ರಾರ್ಥಿಸಿದರು. ರಾಜಶೇಖರ ಹಿರೇಮಠ ಸ್ವಾಗತಿಸಿದರು. ಸೋಮಶೇಖರ್ ಮತ್ತು
ಪ್ರಕಾಶ್ ಲಿಗಾಡೆ ಕಾರ್ಯಕ್ರಮ ನಿರೂಪಿದರು. ಸಂಘದ ಕಾರ್ಯದರ್ಶಿ ಎಂ. ಸಾಮ್ ವಂದಿಸಿದರು.
*****