ಮುಗಿಲಿನ ಚಂದ್ರನೆಷ್ಟು ಪ್ರತಿಫಲಿಸುತ್ತಿದ್ದ
ನೋಡಲು ಬಿಡುವು ಸಿಗಲಿಲ್ಲ
ನೆನ್ನೆಯ ಬುದ್ಧ ಪೌರ್ಣಿಮೆ ನನ್ನಲ್ಲಿ
ಹರಡಿದ ಈ ಬೆಳಕು ಹೊಸದು
ನನ್ನೊಳು ಹರಡಿದ ಬೆಳಕಿನ ಪ್ರಭೆಯೆಷ್ಟು
ಅಳೆಯಲು ಕೋಲು ಸಿಗಲಿಲ್ಲ
ಆನಂದಕೆ ಸಿಕ್ಕಿತು ಹೊಸ ವ್ಯಾಖ್ಯೆ
ಪ್ರೀತಿಗೆ ದಕ್ಕಿತು ಹೊಸ ರೀತಿ
ಮುಂಜಾವು ಮುಗಿದು, ಮಧ್ಯಾಹ್ನ ಕಳೆದು
ಸಂಜೆಯ ಹೊಸ್ತಿಲಲಿ ನಿಂತ ಈ ಚೇತನದ
ಬರುವ ಮುಂಜಾವುಗಳು ಬೆಳಗಲೆಂದು
ಮಿಕ್ಕ ಸಂಜೆ, ರಾತ್ರಿಗಳು ಮೀಸಲು
ಸೂರ್ಯ-ಚಂದ್ರರ ಜತೆಗಿನ ಈ
ಪಯಣ, ನಕ್ಷತ್ರಗಳೊಂದಿಗೆ ಸಾಗಿ
ಗುರಿಯಿರದ ಈ ಬದುಕಿಗೆ ವಿದಾಯ
ಮುಂದಿನ ಬಾಳಿಗೆ ಬಿತ್ತೀಗ ಅಡಿಪಾಯ
-ಮಧುರ ವೀಣಾ, ಬೆಂಗಳೂರು