ರೂಮಿಯ ಎರಡು ಪುಟ್ಟ ಪದ್ಯಗಳು
1
ನೀನು ಜೊತೆಯಿಲ್ಲದೆ
ಬೀದಿಯಲ್ಲಿ ನಡೆದುಕೊಂಡು
ಹೋಗುವುದಕ್ಕಿಂತ
ಕೆಟ್ಟದ್ದಾವುದೂ ಇಲ್ಲ
ನಾನೆಲ್ಲಿಗೆ ಹೊರಟಿರುವೆನೋ
ನನಗೇ ಗೊತ್ತಿಲ್ಲ
ನೀನೇ ಒಂದು ಮಾರ್ಗ,
ಎಲ್ಲ ಮಾರ್ಗಗಳೂ ಗೊತ್ತಿರುವವ
ಭೂಪಟಕ್ಕಿಂತಲೂ ಹೆಚ್ಚಿನವ
ಪ್ರೀತಿಗಿಂತಲೂ ದೊಡ್ಡವ
2
ನೀನಾರೆಂದುನಿನಗೆ ಗೊತ್ತೆ ?
ನೀನೊಂದು ಪವಿತ್ರ ಪತ್ರದ ಹಸ್ತಪ್ರತಿ
ನೀನೊಂದು ಶ್ರೇಷ್ಠವಾದ ಮುಖವನ್ನು
ಪ್ರತಿಬಿಂಬಿಸುವ ಕನ್ನಡಿ
ವಿಶ್ವವು ಹೊರಗೆಲ್ಲೂ ಇಲ್ಲ
ನಿನ್ನೊಳಗೇ ಇದೆ ನೋಡಿಕೋ
ನೀನೇನಾಗಬೇಕೆಂದು ಬಯಸಿರುವೆಯೋ
ಅದೆಲ್ಲವೂ ಈಗಾಗಲೇ ನೀನಾಗಿರುವೆ !
– ಜಲಾಲುದ್ದೀನ್ ರೂಮಿ
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
*****