ಸಂಸಾರ
(ವೃಷಭ ಪ್ರಾಸದಲ್ಲಿ)
ಗಂಡಿರಲಿ ಹೆಣ್ಣಿರಲಿ ಸಹಕಾರ ಹೊಂದಿರಲಿ
ಮುಂದಿರಲಿ ಗುರಿಯದುವೆ ಬಾಳಿನಲ್ಲಿ
ದಂಡಿನಲಿ ಒಂದಾಗಿ ಸಾಗಿಸುತ ಸಂಸಾರ
ಮುಂದಾಗಿ ಜಗದಲ್ಲಿ‐ಧರಣಿದೇವಿ
ಬಂದಿರಲು ಜಗದಲ್ಲಿ ಕಾರಣವು ಅವನಿರಲು
ಕುಂದುಗಳ ನೀಗಿಸುವ ಭಗವಂತನು
ಮಂದಿರದಿ ನೆಲೆಸಿಲ್ಲ ಮನಗಳಲಿ ನೆಲೆಸಿಹನು
ಚಂದದಲಿ ಬದುಕಿದರೆ ‐ಧರಣಿದೇವಿ
-ಧರಣೀಪ್ರಿಯೆ
ದಾವಣಗೆರೆ
*****
👇
[ಮುಕ್ತಕಗಳಲ್ಲಿ ಸಧ್ಯ ಆರು ಪ್ರಾಸಗಳನ್ನು ಬಳಸುತ್ತಾರೆ. ಸಿಂಹ ,ಗಜ,ವೃಷಭ,ಅಜ,ಹಯ ,ಶರಭ ಪ್ರಾಸಗಳು.
ವೃಷಭ ಪ್ರಾಸ ಅಂದರೆ ಒಂದೇ ತರಹದ ವ್ಯಂಜನಾಕ್ಷರದ ಅನುಸ್ವರ ಬಂದರೆ ಅದು ವೃಷಭ ಪ್ರಾಸ.
(ಉದಾ:ಕಂಸ ,ಹಂಸ .ಗಂಡು,ಮೊಂಡ ಇತ್ಯಾದಿ)]
*****