ಅನುದಿನ ಕವನ-೫೦೯, ಕವಿ: ಸಿದ್ದಲಿಂಗಪ್ಪ ಬೀಳಗಿ.ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು


ನಂಬಿಕೆಗಿಂಬು
ಇದ್ದರದು ಸಂಸಾರ
ಬಲು ಸಸಾರ


ನಶ್ವರದಲಿ
ಸ್ವರವ ಹುಡುಕಿದ
ಮಧುರಗಾನ


ಬಲವಂತದ
ಆಲಿಂಗನ; ಕೊರಡು
ಅಪ್ಪಿಕೊಂಡಂತೆ


ಕೆಂಡದಾಸಿಗೆ
ಮೇಲೆ ಮಲಗಿ; ಸುಖ
ನಿದ್ರೆ ಕನಸು


ಅವ್ವನೆದೆಯ
ತುಂಬ; ಅಸಂಖ್ಯ ನೋವು
ಮುಖದಿ ನಗು


ಬೊಗಸೆಯಲಿ
ಹಿಡಿದೆ; ಚಂದ್ರ ಬಿಂಬ
ಸುತ್ತ ಬೆಳಕು


ಕಾದ ಹಂಚಾದ
ವಿರಹ; ನಿನ್ನೊಲವು
ಶಮನೌಷದಿ


ವಿನಾಕಾರಣ
ವಿವಾದ-ಚರ್ಚೆ-ತೆಪೆ
ರಾಜಕಾರಣ


ನಗೆಯ ಭಾಷೆ
ಅರ್ಥವಾಗದವಗೆ
ಜಗವೆ ಶೂನ್ಯ

೧೦
ಸುರಿದ ಮಳೆ
ಬರೆಯಿತದು; ಹೊಸ
ಕಾವ್ಯ ಭುವಿಗೆ

-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ
*****