ಅನುದಿನ ಕವನ-೫೩೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಕವನದ ಶೀರ್ಷಿಕೆ:ಐದು ಹನಿಗವನಗಳು…..

👉5 ಹನಿಗವನಗಳು👇

1.ಗಂಡ — ಹೆಂಡತಿ👇

ದಾಂಪತ್ಯದ
ಸುಖ – ದುಃಖಗಳಲ್ಲಿ
ಒಂದೇ ರೀತಿ
ಸಾಗುವ
ಜೋಡಿ ಎತ್ತುಗಳು.

2.ಮಡದಿ👇

ಮಡದಿ
ಮನೆಯಲ್ಲಿರುವಾಗ
ಬಯಸುವುದು
ಅವಳ ಸಾನಿಧ್ಯ ;
ಅವಳಿಲ್ಲದಿರೆ
ಬರೀ ನೆನಪು
ಈ ಮದ್ಯ

3.ಶ್ರೀ ಕೃಷ್ಣ👇

ಇಬ್ಬರು
ಹೆಂಡಿರ ಕಾಟವ
ತಾಳಲಾರದವನೊಬ್ಬ
ಸಂಸಾರ ತೊರೆದ ;
ಹದಿನಾರು
ಸಾವಿರ
ಹೆಂಡಿರ ಹೊಂದಿದ
ಶ್ರೀ ಕೃಷ್ಣ
ಅದ್ಹೇಗೆ ಮೆರೆದ

4.ಅದಮ್ಯ ಪ್ರೀತಿ👇

ಪತಿ — ಪತ್ನಿ
-ಯರೀರ್ವರಲ್ಲಿ
ಇರಬೇಕು
ಅದಮ್ಯ ಪ್ರೀತಿ ;
ಪ್ರೀತಿ ಇಲ್ಲದಿರೆ
ಬದುಕು ದಿನವೂ
ಯುದ್ಧದ ರೀತಿ

5.ಸಾನಿಧ್ಯ👇

ನಲ್ಲೆ ನೀ
ಮನೆಯೊಳಗಿದ್ದರೆ
ಮನೆ ತುಂಬಾ
ಕಾಲಂದಿಗೆಯ ಶಬ್ದ ;
ನೀ
ನಿಲ್ಲದಿರೆ
ಮನೆ ಏನು
ಮನ ಕೂಡ ಸ್ತಬ್ಧ.

-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ
*****