ಗಝಲ್
ಹೃದಯದ ಪ್ರೇಮದ ಮಕರಂದ
ಅಧರದಿ ಹೀರುವೆಯಲ್ಲ
ಸೌಖ್ಯದ ಸವಿಯ ಆನಂದ
ಸ್ಪರ್ಶದಿ ಹೊಂದುವೆಯಲ್ಲ
ತನುವಿನ ವೀಣೆಯ ತಂತಿಯ
ಬೆರಳಲ್ಲಿ ಮೀಟುತ ಬಂದು
ಅನುದಿನ ನೆನಪಿನ ಬುತ್ತಿಯ
ಮನದಲಿ ತುಂಬಿದೆಯಲ್ಲ
ತರಣಿಯ ಕುಸುಮವ ಕಂಡು
ಕಾಡದೇ ವರಿಸುತ ನಿಂದು
ದೂರದಿ ನಿಲ್ಲುತ ಮೊಗದಿ
ಹಾಸವ ತುಂಬಿದೆಯಲ್ಲ
ಒಲವಿನ ಕೊಳದಲಿ ಮಿಂದು
ಮನವ ಮಡಿ ಮಾಡುತ ಬಂದು
ಒಪ್ಪ ಓರಣವಾಗಿ ನಿಂದು
ನಂದನದ ವನದಲಿ ಓಕುಳಿಯಾಡಿದೆಯಲ್ಲ
ಬಳಿಯಲಿ ಬಯಸದೆ ಸುಳಿದು
ಸಂಭ್ರಮ ಸಡಗರ ತರುತಲಿ
ನಿಲುಕದ ಮೇನೆಯನೇರಿ ರತುನಳ
ಸಂತಸಗೊಳಿಸುವೆಯಲ್ಲ
-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****