ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಅಪೂರ್ವ ಸಂಗಮ ಅವಿಸ್ಮರಣೀಯ -ಡಾ.ವಿಶ್ವನಾಥ ಪಲ್ಲೇದ್

ಬಳ್ಳಾರಿ, ಜೂ.25: ವಿದ್ಯಾರ್ಥಿಗಳು ತಾವು ಕಲಿತ ಶಾಲಾ ಕಾಲೇಜುಗಳಲ್ಲಿ ಎರಡೂವರೆ ದಶಕಗಳ ಬಳಿಕ ಸಮ್ಮಿಲನಗೊಳ್ಳುವುದು ಅವಿಸ್ಮರಣೀಯ ಎಂದು ಜಿಂದಾಲ್ ಫೌಂಡೇಶನ್ ಮುಖ್ಯಸ್ಥ ಡಾ.ವಿಶ್ವನಾಥ ಪಲ್ಲೇದ ಅವರು ಹೇಳಿದರು.


ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಹು ವರ್ಷಗಳ ಬಳಿಕ ಸಮಾವೇಶಗೊಂಡು ಕಾಲೇಜು ದಿನಗಳನ್ನು ಮೆಲುಕು ಹಾಕುವುದು ವಿಶಿಷ್ಟ ಅನುಭವ, ಅಪೂರ್ವ ಸಂಗಮ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಮುಖಂಡ, ರಕ್ಷಾ ಫೌಂಡೇಶನ್ ಅಧ್ಯಕ್ಷ ರಾವೂರ ಸುನೀಲ್ ಅವರು ಮಾತನಾಡಿ, ಶಿಷ್ಯಂದಿರ ಸಾಧನೆ ಕಂಡು ಉಪನ್ಯಾಸಕರು ಬೆರಗಾಗಿದ್ದಾರೆ. , ಇದು ನಮ್ಮೆಲ್ಲರ ವೃತ್ತಿ ಬದುಕಿನ ಸಾರ್ಥಕ ಭಾವ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಎಂ.ಕಿರಣಕುಮಾರ್ ಅವರು ಮಾತನಾಡಿ,
1997ರಲ್ಲಿ ಆರಂಭವಾದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ/ಅರೆ ಸರ್ಕಾರಿ, ಸ್ವಯಂ ಉದ್ಯೋಗ, ಉದ್ಯಮ, ಕಾರ್ಪೋರೆಟ್‌ ಸಂಸ್ಥೆಗಳ ನೌಕರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಇನ್ನೂ ಕೆಲವರು ರಾಜಕೀಯ, ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಎಲ್ಲರನ್ನೂ ಬೆಳ್ಳಿ ಹಬ್ಬದ ನಿಮಿತ್ತ ಒಂದೆಡೆ ಸೇರಿಸಿದೆ ಎಂದರು.
ಪ್ರಾಚಾರ್ಯ ಡಾ.ವೀರಗಂಗಾಧರ ಸ್ವಾಮಿ ಟಿಎಂ ಅವರು ಮಾತನಾಡಿ, ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯಮಟ್ಟದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಅಳಿಕೋಟಿ ವೀರನಗೌಡ, ಹಲಕುಂದಿ ವಿಜಯಕುಮಾರ್. ಸಂಗನಕಲ್ಲು ಚಂದ್ರಶೇಖರ್. ಜಿಂದಾಲ್ ಸಂಸ್ಥೆಯ ಮೈನಿಂಗ್ ‌ವಿಭಾಗದ ರಾಹುಲ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಸಾಧನೆ ಮಾಡಿರುವ ಸಾಧಕರು, ಎಲ್ಲರೂ ಒಟ್ಟಾಗಿ ಸೇರಿ ಮತ್ತೊಮ್ಮೆ ಅವಿಸ್ಮರಣೀಯ ಕ್ಷಣಗಳನ್ನು ತುಂಬಿಕೊಂಡರು.
ಕಾಲೇಜಿನ ಆಡಿಟೋರಿಯಂನಲ್ಲಿ ಜರುಗಿದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ’ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.ಹಲವಾರು ವರ್ಷಗಳ ನಂತರ ವಿದ್ಯೆ ಕಲಿಸಿದ್ದ ಗುರುಗಳು ಹಾಗೂ ಗೆಳೆಯ, ಗೆಳತಿಯರೊಂದಿಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮುಖಾಮುಖಿಯಾದರು. ಖುಷಿಯ ಕ್ಷಣಗಳನ್ನು ಸ್ಮರಿಸುವುದಕ್ಕೆ ಹಾಗೂ ಸದ್ಯದ ಬದುಕಿನ ಕುರಿತು ಪರಸ್ಪರ ಕುಶಲೋಪರಿಗೆ ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿತು.
ವಿವಿ ಸಂಘದ ಶತ ಶತಮಾನದಿಂದ ಶೈಕ್ಷಣಿಕ ಸೇವೆ ಗಮನಾರ್ಹ.
*****