ಅನುದಿನ ಕವನ-೫೪೬, ಕವಯತ್ರಿ: ಸುಮ ಶ್ರೀನಿವಾಸ್ ಅಸಲೀಪುರ, ತುಮಕೂರು .ತಾ. ಕವನದ ಶೀರ್ಷಿಕೆ: ನಾಲ್ಕು ಹನಿಗಳು….

ನಾಲ್ಕು ಹನಿಗಳು…..👇

೧.ಜೀವಂತ ಬೆಂದರೂ
ಅಳಿಯದೆ ಉಳಿದೆ
ಬೆಂಕಿ ಬೂದಿಮಾಡದೆ
ಕರುಣೆ ಹನಿಸಿ ಕಾಪಿಟ್ಟಿತು

೨.ಬಯಸಿದ್ದು ಸ್ವಲ್ಪವೇ ಪ್ರೀತಿ
ಕರುಣೆ ಹನಿಸಬೇಡಿ
ಭರಪೂರ ದ್ವೇಷವನ್ನಾದರೂ
ಸಹಿಸುವೆ ಹುಸಿ ಸಾಂತ್ವನವನ್ನಲ್ಲ

೩.ದುರ್ಗಂಧ ಮರೆಸುವ
ಗಂಧವಾಗಬೇಕು ನಾನು
ಕತ್ತಲಾಳದಲ್ಲಿ ಮಿಣುಕು
ದೀಪವಾಗಬೇಕು

೪.ಇದು ಯಾಂತ್ರಿಕ ಜಗತ್ತು
ಬರೀ ಮುಖವಾಡಗಳ ಗತ್ತು
ಯಂತ್ರ ಸರಿಯಾಗುತ್ತವೆ
ತಂತ್ರಗಳು ಸರಿಯನ್ನೇ ಮುಗಿಸುತ್ತವೆ


-ಸುಮ ಶ್ರೀನಿವಾಸ್
ಅಸಲೀಪುರ.ತುಮಕೂರು .ತಾ.
*****