ಶರೀಫನ ತಂಬೂರಿ
ನನ್ನ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿಲ್ಲ
ಅವರೂ ಪ್ರಶ್ನೆಗಳಲ್ಲೇ ಉತ್ತರಿಸಿದರು
ಪ್ರಶ್ನೆಗೆ ಪ್ರಶ್ನೆಯೇ ಉತ್ರರವಾದೀತೇ?
ಉತ್ತರಗಳಿಲ್ಲದ ಪ್ರಶ್ನೆಗಳು
ನನ್ನ ಬಳಿಯೂ ಇರುವಾಗ
ನನ್ನದೂ ತಪ್ಪಲ್ಲವೆಂದು ಹೇಗೆ ಹೇಳಲಿ?
ಹಾಗೇ ಅಳು ಒತ್ತರಿಸಿ
ಬರುತ್ತಿದೆ
ಹೃದಯದ ಭಾರ ಹೆಚ್ಚುತ್ತಿದೆ
ಮನದಾಳದ ದು:ಖ ನೋವುಗಳಿಂದಲ್ಲ
ನನ್ನವರು ದೂರವಾಗುತ್ತಿದ್ದಾರೆಂಬ ದುಗುಡದಿಂದ
ತಪ್ಪು ಒಪ್ಪುಗಳ ನಡುವೆ
ಒಪ್ಪವಾಗಿಹ ಬದುಕು
ಪ್ರಶ್ನೆಗಳಲೇ ಕಂದಕವಾಗದಿರಲಿ
ನಾನು ನಿನಗೆ ಸೋಲಬೇಕೆಂದಿದ್ದೆ
ನನ್ನೊಳಗಿನ ನೀನು ಸೋಲಲಿಲ್ಲ
ನಾನು ಗೆಲ್ಲಲಾಗುತ್ತಿಲ್ಲ!
ಶರೀಫನ ತಂಬೂರಿ ಶೃತಿ ಹಿಡಿಯಬೇಕಿದೆ
ನನ್ನ ಮನೆಯಂಗಳದ
ಮಣ್ಣಿನಲಿ ಒಡಮೂಡಿದ
ಗಣೇಶ ಪಕ್ಕದ ಮನೆಯ
ಗೌರಿಯ ತೊಡೆಯೇರಿ ಕುಳಿತಿರಲು
-ಮಹಮ್ಮದ್ ರಫೀಕ್, ಕೊಟ್ಟೂರು
*****