ಮಕ್ಳ ಪದ
ಅಪ್ಪ- ಅಮ್ಮಂಗೆ ನಾನು ಅರ್ಥವೇ ಆಗಲ್ಲ
ಅಕ್ಷರ ನಂಗರ್ಥಾಗೋದು ಕಷ್ಟನೇ ಅಲ್ವ||
ಅಪ್ಪ ಇರ್ತಾರೆ ನಿತ್ಯ ನಶೆಯ ಮೇಲೆ
ಅಮ್ಮ ಕೈ ತೊಳಿತಿರ್ತಾಳೆ ಕಣ್ಣೀರಲ್ಲೆ||
ಪುಸ್ತಕ ಕಿತ್ತು ಎಸ್ದೇ ಬಿಡ್ತಾರೆ ನಮ್ಮಪ್ಪ
ಸಿಟ್ ಮಾಡ್ಕಂಡು ಬಸ್ ಹತ್ತಿ ಹೊರಟೇ ಬಿಡ್ತಾಳೆ ಅಮ್ಮ||
ಅಕ್ಷರ ಬೇಕು ಅಂತ ನಂಗೂ ತುಂಬ ಆಸೆ
ಅದ್ಕೂ ಮೊದಲು ನಂಗೆ ಅಪ್ಪ ಅಮ್ಮನ ಆಸೆ||
ಎಲ್ಲರಿಗೂ ಕೈ ಮುಗಿದು ಕೇಳ್ಕೋತೀನಿ ನಾನು
ಮಕ್ಳ ಮನ್ಸು ಹೂವಿದ್ದಂಗೆ ಅರ್ಥಮಾಡ್ಕೊಳಿ ನೀವು||
-ರಂ.ಹೊ(ರಂಗಮ್ಮ ಹೊದೇಕಲ್) ತುಮಕೂರು
*****
ನಿಜ್ವಾಗ್ಲೂ 👌