ತಾಯಿ ತುಂಗಭದ್ರೆ
ಶತಶತಮಾನಗಳಿಂದ ಹಂಪಿಯ ಕಿಷ್ಕಿಂದ ಆಂಜನಾದ್ರಿಗಳ ನಡುವೆ ಹರಿಯುತ್ತಿದ್ದಾಳೆ.ಆಶ್ವಿನಿ ರೋಹಿಣಿ ಕೃತಿಕಗಳಿಗೆ ಕೇಕೆ ಹಾಕುತ್ತಾಳೆ .ಮೈದಡುವುತ್ತಾಳೆ ಬೆಟ್ಟ,ಬಂಡೆ ಮಂಟಪ,ಗುಡಿ ಗುಂಡಾರಗಳನ್ನು,ಬಾಚಿಕೋಳ್ಳುತ್ತಾಳೆ ಮನೆ ಮಠ ಜೋಪಡಿಗಳನ್ನು. ಕಣಕಣದಲ್ಲೂ ಬಿಸಿಲ ತಣಿಸುವ ಬಂಡೆಗಳ ಮೇಲೆ ಕಾಲಿಟ್ಟರೆ ಪಾತಾಳ ನಾಭಿಸುಳಿ ಚಕ್ರತೀರ್ಥ.ತಲೆದೂಗುತ್ತಾಳೆ ಪಚ್ಚನೆಯ ಪಯಿರಾಗಿ,ಬಾಳೆಗೊನೆಗಳಿಗೆ ತೊಡೆ ನಲುಗುತ್ತಾಳೆ. ತೆಂಗುಗಳ ತುದಿಯಲ್ಲಿ ಹುದುಗುತ್ತಾಳೆ. ಹರಿಯುತ್ತಾಳೆ ದಿಗ್ ದಿಗಂತಗಳ ದಾಟಿ ಮೂಡಣದ ಕಡೆಗೆ ನಿನ್ನ ಇಕ್ಕೆಲದಲ್ಲಿ ಗುಡಿಗುಂಡಾರ ದಾವಸಿಗಳ ಅವತಾರ ಇಳಿದು ಬಾ ತಾಯಿ ಚಪ್ಪಾನ್ನಾರು ಮಳೆ ಋತುಗಳ ಅಡಗಿಸಿ ಕೊಂಡು ಬಯಲ ನಾಡಿಗೆ .ಕಡಲ ಕರೆಗೆ ಓಗೊಟ್ಟು ಹರಿಯದಿರು ಚಲುವೆ ಈ ನಾಡ ಮರೆತು
-ಎಂ.ಎಂ.ಶಿವಪ್ರಕಾಶ್, ಹಂಪಿ ಕನ್ನಡ ವಿವಿ👆
👉ಚಿತ್ರ ಕೃಪೆ: ಹಂಪಿ ಬಣಗಾರ, ಹೊಸಪೇಟೆ👇
*****
ತುಂಬಾ ಚೆನ್ನಾಗಿದೆ ಮಿತ್ರ. ನನ್ನ ಚಿತ್ರ ಬಳಸಿಕೊಂಡಿದ್ದಕ್ಕೆ ಧನ್ಯವಾದಗಳು