ಅನುದಿನ ಕವನ-೫೬೨, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಬಣ್ಣದ ಚಿಟ್ಟೆ

ಬಣ್ಣದ ಚಿಟ್ಟೆ

ರಂಗು ರಂಗಿನ ಹಾರುವ ಚಿಟ್ಟೆ
ಅಂದ ಚೆಂದದ ಬಣ್ಣದ ಚಿಟ್ಟೆ|

ಹೂವಿಂದ ಹೂವಿಗೆ ಹಾರುವ ಚಿಟ್ಟೆ
ಸವಿಯನು ಹೀರಿ ಪಕಳೆಯ ಅರಳಿಸಿ|

ಒಲವಿನ ಮುತ್ತನು ಸುರಿಸುವ ಚಿಟ್ಟೆ
ನಲಿಯುತ ನಗುತಲಿ ಬದುಕುವ ಚಿಟ್ಟೆ|

ಮಕ್ಕಳಿಗಂತು ಪ್ರೀತಿಯ ಪತಂಗ
ಬಯಸುತ ಆಟದಿ ನಿನ್ನಯ ಸಂಗ|

ಹಿಡಿಯಲು ಹೋದರೆ ನೀನು ಪರಾರಿ
ಜೀವನ ಇಷ್ಟೇ ಪಾಠವ ಸಾರಿ|

ಖುಷಿಯಲಿ ಬಾಳುವ ನೀತಿಯ ಹೇಳಿ
ಅದಲು ಬದಲಿನ ಹೂವನು ಅರಸಿ|

ಹೊಳೆಯುವ ಪರಿಯನು ನೀಡುತ ಸಾಗಿ|
ಪ್ರೀತಿಯ ರಂಗನು ಹಂಚುತ ಜಗದಿ||


-ಧರಣೀಪ್ರಿಯೆ, ದಾವಣಗೆರೆ
*****