ಅನುದಿನ ಕವನ-೫೬೫, ಕವಿ: ಮಹಿಮ, ಬಳ್ಳಾರಿ

ಅವಳನ್ನು ಹುಡುಕುತ್ತಲೇ ಇರುವೆ
ಮತ್ತೆ ಮತ್ತೆ
ಮೊದಲ ಬಾರಿಗೆ ನನ್ನ ಪ್ರೀತಿಸಿದವಳ

ಅವಳೆಲ್ಲಿ ಕಾಣಿಸುತ್ತಲೇ ಇಲ್ಲ
ಎಲ್ಲಿಗೆ ಹೋದಳೋ ಏನೋ?
ಎಷ್ಟೋ ವರ್ಷಗಳಾದವು?
ಎಲ್ಲಿರುವಳೋ ಏನೋ?

ಹೆಣ್ಣಾದವಳಿಗೆ ಬಯಸಿದ್ದು ಸಿಗದು
ಗಂಡಸಿನ
ಅಡಿಯಾಳಾಗಿ
ಜೀತದಾಳಾಗಿ
ಎಲ್ಲಿರುವಳೋ ಏನೋ?

ನಾನು ಅವಳಿಗೆ ನೆನಪಾದರೂ ಮಾಡಿಯಾಳು
ಏನನ್ನು?
ಒಂದು ನಿಟ್ಟುಸಿರು
ಒಂದಷ್ಟು ಕಣ್ಣೀರು ಸುರಿಸುವುದ ಬಿಟ್ಟು, …


-ಮಹಿಮ, ಬಳ್ಳಾರಿ
****