ಸಮತೆಯ ಸುಧೆ….!
ಕಂಬನಿ ಅಳಿಸಿ
ಎಲ್ಲರ ನಗಿಸಿ
ಜಗದ ಕಾರುಣ್ಯ
ನೆಲದ ಲಾವಣ್ಯ
ನೀನೆ ನುಡಿಸಿ ನೆರಳಾಗಿ ನಿಂದೆ
ನೀ ನಡೆವ ವೇಳೆ ಈ ಭುವಿಯೆ ಧನ್ಯ
ಏ…ಸಮತೆಯ ಸುಧೆಯೆ…ನೀ…ಸಮತೆಯ ಸುಧೆ…
ಅರಿವಿನ ಮನೆಯೆ
ಬೆಳಕಿನ ಹೊಳೆಯೆ
ಎಲ್ಲರ ಏಳಿಗೆ ಬಯಸಿದ ಸಮತೆಯ ನಿಧಿಯೆ
ಪ್ರೀತಿಯ ತಂಗಾಳಿಯೆ
ಸಾಂತ್ವನದ ಸಂಗಾತಿಯೆ
ನೊಂದುಬೆಂದವರ ಕಷ್ಟ ಕೇಳುವ ಸವಿನುಡಿಯೆ
ನೀನೆ ನೇಸರ ಈ ನೆಲದ ಸಿಂಧೂರ
ಏ…ಸಮತೆಯ ಸುಧೆಯೆ ನೀ ಸಮತೆಯ ಸುಧೆ…..
ನಿಸರ್ಗ ಸೀಮೆಯೆ
ಬಂದಿದೆ ನಿನ್ನೊಡನೆಯೆ
ಕಡಲು ಮುಗಿಲು ಎಲ್ಲ ನಿನ್ನ ಹಿಂದೆಯೆ
ಸ್ವಾಭಿಮಾನ ಘನತೆಯೆ
ಕಲಿಸಿದೆ ನೀನಾಗಿಯೆ
ಸಾವುನೋವುಗಳ ಸತ್ಯ ತಿಳಿಸಿದ ಜ್ಞಾನಿಯೆ
ನೀನೆ ನೀಲಿ ಈ ಜನರ ಪ್ರೀತಿ
ಏ…ಸಮತೆಯ ಸುಧೆಯೆ ನೀ ಸಮತೆಯ ಸುಧೆ…..
-ಸಿದ್ದುಜನ್ನೂರ್, ಕೊಳ್ಳೇಗಾಲ
*****